Wednesday, July 31, 2013

ಇಷ್ಟಲಿಂಗ


ಇಷ್ಟಲಿಂಗ

ಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ. ನಿರಾಕಾರ ದೇವನನ್ನು ಮನುಷ್ಯರ, ಪ್ರಾಣಿಗಳ ಆಕಾರದಲ್ಲಿ ಕಲ್ಪಿಸದೆ ವಿಶ್ವದ ಆಕಾರದಲ್ಲಿ ರೂಪಿಸಿ, ಇಷ್ಟಲಿಂಗವನ್ನಾಗಿ ಕೊಟ್ಟವರು ಮಹಾಗುರು ಬಸವಣ್ಣನವರು, ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಇರದ ದೇವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಕವಾಗಿ ರೂಪಿಸಿ ಪೂಜಿಸುವ ಪರಿಪೂರ್ಣತೆಯನ್ನ ಇಲ್ಲಿ ಕಾಣಬಹುದು. ನಿರಾಕಾರವನ್ನು ಸಾಕಾರ ಮೂಲಕ ಗ್ರಹಿಸಿಕೊಳ್ಳುವ ಪರಿಪಾಠ ಆಧ್ಯಾತ್ಮಿಕ, ವ್ಯೆವಹಾರಿಕ ಎರಡು ಪ್ರಪಂಚದಲ್ಲಿ ಉಂಟು, ನಿರಕಾರವಾದ ವೇಳೆಯನ್ನ ಅರಿಯಲಿಕ್ಕೆ ಸಾಕಾರವಾದ ಗಡಿಯಾರವು ಸಾಧನಗುವಂತೆ ನಿರಕಾರವಾದ ದೇವನನ್ನ ಅರಿಅಯಲಿಕ್ಕೆ ಇಷ್ಟಲಿಂಗವು ಸಾಕಾರ ಕುರುಹು. ಇದು ಯಾವುದೇ ಒಬ್ಬ ವ್ಯೆಕ್ತಿಯ ಮೂರ್ತಿಯಲ್ಲ, ಪ್ರಾಣಿಯ ಮೂರ್ತಿಯೂ ಅಲ್ಲ. ಗುಡಿಯಲ್ಲಿನ ಲಿಂಗದಂತೆ ಪೌರಾಣಿಕ ಶಿವನನ್ನು ಸಂಕೇತಿಸುವುದು ಅಲ್ಲ. ಜಗತ್ತನ್ನೆಲ್ಲ ತುಂಬಿಕೊಂಡಿರುವ ಪರಮಾತ್ಮನ ಶರಿರವವಾದ ಬ್ರಹ್ಮಾಂಡವು ಗೋಲಾಕಾರದಲ್ಲಿ ಇರುವದರಿಂದ ಆ ಆಕಾರದಲ್ಲಿ ರೂಪಿಸಿಕೊಂಡ ಕುರುಹು. ಇದಕ್ಕೆ ಸಾಮಾಜಿಕ, ಯೋಗಿಕ, ಆಧ್ಯಾತ್ಮಿಕ ಅರ್ಥವ್ಯಾಪ್ತಿ ಇದೇ. ಇದು ಮೇಲು-ಕೀಳು ಎಂಬ ಸೂತಕವನ್ನು ತೊಡೆದು ಹಾಕುವ ಸಾಧನ. ಬ್ರಾಹ್ಮಣನು ಲಿಂಗಧಾರಕನಾದರೆ ತಾನು ಮೇಲು ಎಂಬ ಮೇಲರಿಮೆಯನ್ನು, ಅಂತ್ಯಜನು ಲಿಂಗಧಾರಕನಾದರೆ ತಾನು ಕೀಳು ಎಂಬ ಕೀಳರಮಿಯನ್ನು ಬಿಟ್ಟು ಕೊಡಬೇಕಾಗುತ್ತದೆ. ಆಗ ಇಬ್ಬರಲಿಯೂ ಸಮಾನತೆ ಸ್ಥಾಪಿತವಾಗುತ್ತದೆ.

ಇಷ್ಟ ಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ ಅದು ದೃಷ್ಟಿ ಯೋಗ ಅಥವಾ ತ್ರಟಕ ಯೋಗಕ್ಕೆ ಸಹಾಯಕ ಸಾಧನವಾಗುವುದು. ಆಲಿಯ ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪವ ಮಾಡಿ ಹಚ್ಚಿದರೆ ತಾನೇ ನೋವು ಮಾಯವಾಗುವುದು! ಅದೇ ರೀತಿ ಮಾನವನ ಒಳಗಿರುವ ಆತ್ಮ ಚೈತನ್ಯವು ಭವನ್ನ ಕಳೆಯಲಾರದು; ಇದನ್ನರಿತ ಶ್ರೀ ಗುರುವು ಅಂತರಂಗದ ಆತ್ಮ ಚೈತನ್ಯವನ್ನು ಚುಳಕಾಗಿ ಹೊರತೆಗೆದು ಹುಟ್ಟುಲಿಂಗವನ್ನಾಗಿ ರೂಪಿಸಿ, ಎರಡನ್ನು ಅಭಿನ್ನವಾಗಿ ಇಂಬಿಟ್ಟು ಶಿಷ್ಯನಿಗೆ ಧಾರಣ ಮಾಡುವನು. ಈ ಕರಸ್ತಲದ ಚ್ಯೋತಿ, ಅರುಹಿನ ಕುರುಹು ಮತ್ತೆ ಅಂತರಂಗವನ್ನು ಪ್ರವೇಶಿಸಿ ಕಾಯವನ್ನೇ ಕೈಲಾಸವನ್ನಾಗಿ ಮಾಡಿ ಪುನೀತಗೊಳಿಸುವುದು.

ಅಂತೆಯೇ ಷಣ್ಮುಖ ಸ್ವಾಮಿಗಳು 'ಇಷ್ಟಲಿಂಗವು ತನ್ನಿಂದ ಭಿನ್ನವಾದ ವಸ್ತುವಿನ ಮೂರ್ತಿಪೋಜೆಯಲ್ಲ ; ಜೀವಾತ್ಮ-ಪರಮಾತ್ಮರನ್ನ ಬೆಸುಗೆ ಮಾಡಿ ಪೂಜಿಸುವ ಅಹಂಗ್ರಹೋಪಾಸನೆ ' ಎಂದು ಹೇಳಿರುವರು.

ಎನ್ನ ಕರಸ್ಥಲದ ಮದ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ, ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯ ತೋರಿದ;
ಆ ಕಳೆಯ ಮಧ್ಯೆದಲ್ಲಿ ಮಹಾಜ್ಞಾನದ ಬೆಳಗ ತೋರಿದ
ಆ ಬೆಳಗಿನ ನಿಳುವಿನೊಳಗೆ ಎನ್ನ ತೋರಿದ
ಎನ್ನೋಳಗೇ ತನ್ನ ತೋರಿದ, ತನ್ನೊಳಗೆ ಎನ್ನ ನಿಂಬಿಟ್ಟು ಕೊಂಡ
ಮಹಾ ಗುರುವಿಗೆ ನಮೋ ನಮೋ ಎನುತಿರ್ಪೆ
ನಯ್ಯಾ ಅಖಂಡೇಶ್ವರಾ !

ಕೆಲವರು ಇಷ್ಟಲಿಂಗ ಪೂಜೆಯು ಸಹ ಸ್ಥಾವರಲಿಂಗ ಪೂಜೆ ಎನ್ನುವರು. ಆದ್ರೆ ಶರಣರು ತಮ್ಮ ವಚನಗಳಲ್ಲಿ ಈ ತಪ್ಪು ಹಾಗೂ ಕೆಟ್ಟ ಅಭಿಪ್ರಾಯವನ್ನ ಅಲ್ಲಗಳೆದಿದ್ದಾರೆ.

ಪರಬೊಮ್ಮವೆ ಶರಣನ ಶಿರದರಮನೆಯಿಂದ ಕರದರಮನೆಗೆ
ಗುರುಕೃಪೆಯಿಂದ ಲಿಂಗ ಮೂರ್ತಿಯಾಗಿ ಬಿಜಯಂ
ಗಯೇ ದೆರ್ಪುದು ಕಂಡಾ !
ಅದು ಕಾರಣ, ಶರಣಂಗೆಯೂ ಲಿಂಗಕ್ಕೆಯೂ ಭೇದಾ
ಭೇದ ಸಂಬಂಧವಿರ್ಪುದು ಕಂಡಾ !
ಈ ಗೊತ್ತನರಿಯದೆ ಯುಕ್ತಿಗೆಟ್ಟ ಮನುಜರು
ಲಿಂಗವು ಕೈಲಾಸದ ಶಿವನ ಕುರುಹಾದುದಾರಿಂದ ಪೂಜ್ಯ ವೆಂಬರು :
ಶರಣು ಮನುಜನಾದುದರಿಂದ ಅವನು ಪೂಜಕ ನೆಂಬರು
ಇಂತಿ ಕೇವಲ ಭೇದಸಂಬಂಧವ ಕಲ್ಪಿಸುವ ಭಾವಭಾರಿಗಳು
ಶಿವಾದ್ವೈತಕ್ಕೆ ದೂರವಗಿಪ್ಪರು ಕಂಡಾ :
ಅರೆಯರಿವಿನ ನರಜೀವಿಗಳು ಶರಣರ ಸಾಮರಸ್ಯಕೆ
ಹೊರಗಾಗಿರ್ಪರು ಕಂಡಾ.
ಕೂಡಲ ಚನ್ನ ಸಂಗಮದೇವಾ.

ಲಿಂಗವಂತರು ಧರಿಸಿ ಪೂಜಿಸುವ ಇಷ್ಟಲಿಂಗವು ಪೌರಾಣಿಕ ಶಿವನ ಪ್ರತಿಕವಲ್ಲ. ಶಿರದರಮನೆಯಲ್ಲಿ ನೆಲಸಿರುವ ಪರಬೋಮ್ಮದ ಪ್ರತೀಕ ಎನ್ನುವುದು ಶರಣರ ವಾಣಿ.

ಇಂತಹ ಅತ್ಯುನ್ನತವಾದ ತತ್ವವುಳ್ಳ ಇಷ್ಟಲಿಂಗವನ್ನು ಪ್ರತಿಯೊಬ್ಬ ಅನುಯಾಯಿಯೂ ಧರಿಸಲೇಬೆಕು. ಏಕೆಂದರೆ ದೇವನಿಗೆ ಎಡೆಮಾಡದೆ ಅವನು ಏನನ್ನು ತಿನ್ನಬಾರದು. ಜಗತ್ತೆಲವೂ ದ್ಯೆವಿವರ, ಅದನ್ನು ಉದಾರವಾಗಿ, ದಾನವಾಗಿ ದೇವರು ನಮಗೆ ಕೊಟ್ಟಾಗ ಅವನಿಗೆ ಕೃತಜ್ಞತೆ ಸಲ್ಲಿಸದೆ ಭೋಗಿಸುವುದು ಕೃತಘ್ನ ಕಾರ್ಯ. ಆದ್ದರಿಂದ ಪ್ರತಿಯೊಂದನ್ನು ನಾವು ಭೋಗಿಸುವ ಮುನ್ನವೇ ಅದನ್ನು ಸಾಂಕೇತಿಕವಾಗಿ ದೇವನಿಗೆ ಅರ್ಪಿಸಿ ಸ್ವೀಕರಿಸಬೇಕು. ಹೀಗೆ ಅರ್ಪಿಸುವ ಕಾರ್ಯವೇ ಪೂಜೆ ಇದರ ಅಂಗವಾಗಿ ನಿತ್ಯ ಲಿಂಗಾರ್ಚನೆಯನ್ನು ಮಾಡಿ, ದಿನದ ಮೊದಲ ಪ್ರಸದವಾಗಿ ಇಷ್ಟಲಿಂಗ ತೀರ್ಥ, ಇಷ್ಟಲಿಂಗ ಪ್ರಸಾದಗಳನ್ನು ಸ್ವೀಕರಿಸಿ ಜೀವನವನ್ನು ದಿವ್ಯಗೊಳಿಸಿಕೊಳ್ಳಬೆಕು.

ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೇ ?
ಹಿಂಗಲಾಗದು ಭಕ್ತಿ ಪಥಕ್ಕೆ ಸಲ್ಲದಾಗಿ !
ಹಿಂಗಲಾಗದು ಶಿವಶರಣರ ಪಥಕ್ಕೆ ಸಲ್ಲದಾಗಿ !
ಕೂಡಲಸಂಗಮ ದೇವರ ಹಿಂಗಿ ನುಂಗಿದುಗುಳು ಕಿಲ್ಪಿಷ?

ಇದನಾರಿತು ನಿತ್ಯ ಲಿಂಗಾರ್ಚನೆ ಮಾಡುವವನೇ ಲಿಂಗಾಯತನು ಸರ್ವರೂ ಲಿಂಗಾರ್ಚನೆಯನ್ನು ಮಾಡಬೇಕಾದರೆ ಅವರು ತಮ್ಮ ತಮ್ಮ ಇಷ್ಟಲಿಂಗಗಳನ್ನು ಧರಿಸಿಕೊಂಡಿರಲೇಬೇಕಷ್ಟೇ ? ಧರ್ಮಾಚರಣೆಗಳು ಶಿಥಿಲವಾದಾಗ ಜನರು ಲಿಂಗಧಾರಣೆಯ ಮಹತ್ವವನ್ನರಿಯದೆ ಧರಿಸುವುದುವುದನ್ನ ಬಿಟ್ಟು ಬಿಡುತ್ತಾರೆ. ಏನೋ ಅಂತಹ ಪ್ರಸಂಗ ಒದಗಿದಾಗ ಗಂಡ_ಹೆಂಡತಿ_ಮಕ್ಕಳು ಪರಸ್ಪರ ಎರವಲನ್ನ ಪಡೆದು ಕೇವಲ ಶಾಸ್ತ್ರಕ್ಕೆಂಬತೆ ಪೂಜಿಸುತ್ತಾರೆ. ಗುರು ಚಿತ್ಕಳೆ ತುಂಬಿಕೊಟ್ಟ ವಸ್ತುವನ್ನು ಶರೀರದಿಂದ ಅಗಲಿಸಿ ಬೇರೆ ಬೇರೆಯವರು ಹಾಗಿ ಪೂಜಿಸುಲಾಗದು ಅದನ್ನು ಚನ್ನಬಸವಣ್ಣ ನವರು ಟೀಕಿಸಿದ್ದಾರೆ.

ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ;
ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ ;
ಅಳಸಿ ನಾಗವತ್ತಿಗೆಯಲಿರಿಸಿದುದು ಪ್ರಾಣಲಿಂಗವಲ್ಲ
ತನುಸೊಂಕಿ ವಜ್ರದಂತಿರಬೇಕು.
ಮನದಲ್ಲಿ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದಡೆ
ಅವನಂದೇ ವ್ರತಗೇಡಿ, ಕೂಡಲ ಚನ್ನ ಸಂಗಮದೇವಾ

ಗುರುವಿತ್ತ ಇಷ್ಟಲಿಂಗವನ್ನು ಅಗಲಿಸಿದರೆ ಅದರಲ್ಲಿನ ಚಿತ್ಕಳೆಯು ಪತನಗೊಳ್ಳುವುದು, ಗುರುಕಾರುಣ್ಯವು ಇಷ್ಟಲಿಂಗದಲ್ಲಿ ಹರಿದು ಸದಾಕಾಲದಲ್ಲಿ ಶಿಷ್ಯನನ್ನು ರಕ್ಷಿಸುವುದು. ಆದ ಕಾರಣ ಪ್ರತಿಯೊಬ್ಬರೂ ಅದನ್ನ ಧರಿಸಿ ಪೂಜಿಸಬೇಕು.

ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ
ಮತ್ತೆ ಬಿತ್ತುತ್ತಾ ಹೋದರೆ,
ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು
ಬೆಳೆಸನ್ನೀವ ಪರಿಯಂತೋ, ಮರುಳ ಮಾನವಾ!
ಗುರುವಿತ್ತ ಲಿಂಗವ ತೊರೆತೊರೆದು ಮರಳಿ
ಮರಳಿ ಧರಿಸಿದಡೆ ಆ ಇಷ್ಟಲಿಂಗವು ಅನಿಷ್ಟವ
ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೋ
ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ ಮುಕ್ತಿಯನರವೂಡೆ
ಅಂಗದಲ್ಲಿ ಹೆರೆಹಿಗಂದೆ ಲಿಂಗವ ಧರಿಸಬೇಕು.

Saturday, June 9, 2012

ಶರಣರ ವಚನಗಳಲ್ಲಿ "ಲಿಂಗ"ದ ಸ್ವರೂಪ

"ಲಿಂಗ" ಪದದ ಅರ್ಥವು ವ್ಯಾಪಕವಾಗಿದೆ. ಅದರ ಸಾಮಾನ್ಯ ವಾದ ಅರ್ಥವು ಚಿಹ್ನೆ, ಗುರುತು ಕುರುಹು ಎಂದು ಹೇಳಬಹುದು, ಇದೇ ಅರ್ಥಗಳನ್ನ ಅನೇಕ ಪ್ರಯೋಗ  ಗಳ್ಳನ್ನು ಉಪನ್ನಿಷತ್ ಸಾಹಿತ್ಯದಲ್ಲಿರುವ ವಾಕ್ಯಗಳಿಂದ ನಾವು ಕಂಡುಕೊಳ್ಳಬಹುದು. ವಚನ ವಾಜ್ಮಯದಲ್ಲಿ  'ಪರಶಿವ',  ಶಿವ, ಲಿಂಗ ಮುಂತಾದ ಎಲ್ಲಾ ಪದಗಳು ಪರಮಾತ್ಮನನ್ನು  ಸಂಕೇತಿಸುವೆ. ಶಿವ ಶಬ್ದವನ್ನು ವಚನಕಾರರು ಬಳಸಿಕೊಂಡಿರುವರಾದರು ಅವರು ಹೆಚ್ಚು ಒತ್ತುಕೊಟ್ಟು, ಆಸಕ್ತಿ ವಹಿಸಿ ಬಳಸಿಕೊಂಡಿರಿವಿದು "ಲಿಂಗ" ಪದವನ್ನು. ವಚನ ವಾಜ್ಮಯದಲ್ಲಿ ದೃಷ್ಟಿ ಯಲ್ಲ್ಲಿ. ಲಿಂಗಾಯತ ಧರ್ಮ, ತತ್ವ ಶಾಸ್ತ್ರಗಳಲ್ಲಿ "ಲಿಂಗ" ದ ಅರ್ಥವ್ಯಾಪಿ ನೋಡೋಣ.

"ಲಿಂಗ" ಸಂಸ್ಕೃತ ಪದ, ಇದನ್ನ ಮಗ್ಗಿಯ ಮಾಯಿದೆವರು ತಮ್ಮ ಶಿವಾನುಭವ ಸೂತ್ರದಲ್ಲಿ ಹೀಗೆ ವ್ಯಾಖ್ಯಾನಿಸುತ್ತಾರೆ.
ಲೀಯತೆ ಗಮ್ಯತೇಯತ್ರ ಏನ ಸರ್ವಂ ಚರಚರಂ
ತದೇ ತಲ್ಲಿಂಗ ಮಿತ್ಮುಕ್ತಂ ಲಿಂಗತತ್ತ್ವ ಪರಾಯಣ್ಯೇ :

ಈ ತೋರುವ ಸಚರಾಚರ ಸೃಷ್ಟಿಯಲ್ಲವೂ ಯಾವುದರಿಂದ ಹೊರಹೊಮ್ಮಿ, ಎಲ್ಲಿ ಲೀಲೆಯಾಡಿ ಕೊನೆಗೆ ಯಾವುದರಲ್ಲಿ ಲಯವಗುವುದೋ ಅದು ಲಿಂಗವೆಂದು ಮಗ್ಗೆಯ ಮಾಯಿದೆವರು ಲಿಂಗಕ್ಕೆ ನಿರ್ವಚನ ನೀಡಿದ್ದಾರೆ. ತೋರುವ ತೋರಿಕೆಯಲ್ಲದಕ್ಕೂ ಆಧಾರಭೂತವಾಗಿ, ಅದರ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ ಕರ್ತೃವಾಗಿ ಇರುವ ಅವ್ಯಕ್ತವಾದ ಚೈತನ್ಯವೇ ಲಿಂಗವೆಂದು ಹೇಳಬಹುದು.

ಲಿಕಾರವೇ ಶೂನ್ಯ, ಬಿಂದುವೇ ಲೀಲೆ
ಗಕಾರವೇ ಚಿತ್ತು, ಈ ತ್ರಿವಿಧದೊಳಗದೆ
ಲಿಂಗವೆಂಬ ಸಕೀಲ. ಅದರ ಸಂಚವನಾವಾತಬಲ್ಲ
ಆತನೇ ಲಿಂಗ ಸಂಗಿ, ಕೂಡಲ ಚನ್ನಾ ಸಂಗಮದೇವಾ
ಲಿಂಗನುಭಾವಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆ !

ಚಿತ್ ಚೈತನ್ಯ ಗಮಿಸಿ ಜಗತ್ ಚೈತನ್ಯವಾಗಿ ಸೃಷ್ಟಿಯಾಯಿತ್ತಾಗಿ ಗಕಾರವೇ ಚಿತ್ತು ಎಂಬುದಾಗಿಯೂ. ಆ ಮಧ್ಯದ ಚಿದ್ಬಿಂದುವೆ ಆ ಚಿತ್ ಚೈತನ್ಯಕ್ಕೆ ಅಂಗವಾಗಿ ಲೀಲಸ್ಥಿತಿಯ ನಟಿಸುತ್ತಿಹುದಾಗಿ. ಬಿಂದುವೇ ಲೀಲೆ ಎಂದೂ, ಲಿಕಾರವೇ ಲಯವನೆಯ್ದಿಸಿ  ಸರ್ವ ಶೂನ್ಯ ಮಾಡುವುದಾಗಿ. ಲಿಕಾರವೇ ಶೂನ್ಯವೆಂದೂ ಹೀಗೆ ಜಗದುತ್ಪತ್ತಿ  ಸ್ತಿತಿ ಲಯಗಳು ಯಾವುದರಿಂದ ಆಗುವುದೋ ಅದುವೇ ಲಿಂಗವೆಂದೂ ಲಿಂಗ ಶಬ್ದಕ್ಕೆ ನಿರ್ವಚನ ಮಾಡಿದ್ದರೆ ಮತ್ತು ಅಂಥ ಲಿಂಗದ ಮರ್ಮವನರಿದು ಆಚರಿಸುವ ಲಿಂಗನುಭಾವಿಗಳಿಗೆ ಶರಣು ಮಾಡಿದ್ದರೆ ಚೆನ್ನಬಸವಣ್ಣ ನವರು.

ಲಿಂಗವೆಂಬುದು ಪರಶಕ್ತಿಯುಕ್ತ
ಲಿಂಗವೆಂಬುದು  ಪರಶಿವನ ನಿಜದೇಹ
ಲಿಂಗವೆಂಬುದು  ಪರಶಿವನ ಘನ ತೇಜ
ಲಿಂಗವೆಂಬುದು  ಪರಶಿವನ ನಿರತಿಶಯಾನಂದ ಸುಖ
ಲಿಂಗವೆಂಬುದು  ಪರಶಿವನ ಪರಮಜ್ಞಾನ
ಲಿಂಗವೆಂಬುದು  ಪರಶಿವನು ತಾನು,
ಲಿಂಗವೆಂಬುದು  ಷಡಧ್ವಮಯ ಜಗಜ್ಜನ್ಮ ಭೂಮಿ ತಾನು ,
ಲಿಂಗವೆಂಬುದು  ಅಖಂಡಿತ ಅಭೆಧ್ಯ ಪಂಚ ಸಂಜ್ಞೆ ತಾನು,
ಲಿಂಗವೆಂಬುದು ಹರಿಬ್ರಹ್ಮ ರ ನಡುವೆ ನೆಗಳ್ದ
ಜ್ಯೋತಿರ್ಮಯಲಿಂಗ ಶ್ರುತಿ: "ಅಲಯಂ
ಸರ್ವ ಭೂತಾನಾಂ ಲಯಾನಾಮ್ ಲಿಂಗ ಮುಚ್ಯತೆ" ಎಂದುದಾಗಿ
ಇದು ಲಿಂಗದ ಮರ್ಮ ಉರಿಲಿಂಗ ಪೆದ್ದಿಪ್ರಿಯ
ವಿಶ್ವೇಶ್ವರ ಲಿಂಗದೋ  ತಿಳಿಯಬಲ್ಲಾತನೇ ಬಲ್ಲವನು...

"ಲಿಂಗ" ಪದದ ಬಳಕೆಯನ್ನ ವ್ಯೆವಿಧ್ಯಮಯ ಅರ್ಥಗಳೊಡನೆ ಮಾಡಬಹುದೆಂದು ಉರಿಲಿಂಗ ಪೆದ್ದಿಗಳು ಅಭಿಪ್ರಯ ಪಡುತ್ತಾರೆ. "ಲಿಂಗ"ವು ಪರಾಶಕ್ತಿ ಯುಕ್ತಾನಾದ ಪರಮಾತ್ಮನನ್ನು ಸಂಕೇತಿಸುತ್ತದೆ. ನಿರಾಕಾರ ದೇವನ ನಿಜದೇಹ ಅಥವಾ ಸಾಕಾರದ ಸಂಕೇತ. ಪರಮಾತ್ಮನ ಪ್ರಕಾಶ, ಆನಂದ, ಜ್ಞಾನಗಳ ತವರು ಎನ್ನುವುದನ್ನೂ ಈ ಪದವು ಪ್ರತಿನಿಧಿಸುತ್ತದೆ. ಲಿಂಗವೆನ್ನುವುದು ಪರಶಿವನಿಗೇ. ಇದು ಷಡ್ ತತ್ವಗಳಿಂದ ಕೂಡಿದ ಜಗತ್ತಿಗೆ ಜನ್ಮ ಭೂಮಿ. ಅಂದರೆ ಲೋಕವನ್ನ ಹೆರುವ ಮಹಾ ಗರ್ಭ. ಪರಮಾತ್ಮನು ಹರಿ, ಹರ ರನ್ನೂ ಮೀರಿದ ಜ್ಯೋತಿ ಸ್ವರೂಪನು. ಸಮಸ್ತ ಜಗತ್ತು  ಲಯವಾಗಲು ಇರುವ ಗಮ್ಯವು ಮತ್ತು ಸಚರಾಚರ ವಸ್ತುಗಳಿಗೆಲ್ಲ ಆಲಯವು.

ಹೀಗೆ "ಲಿಂಗ" ಪದವು ಪರಮಾತ್ಮ ವಾಚಕ, ಪರಶಿವ ಸೂಚಕ ಎಂಬುದು ಇಲ್ಲಿ ಸ್ಪಷ್ಟ ವಾಗುತ್ತದೆ.
ಲಿಂಗವೆಂಬುದು  ಸರ್ವಕಾರಣ ನಿರ್ಮಲ ,
ಲಿಂಗವೆಂಬುದು ಸಚ್ಚಿದಾಂದ ನಿತ್ಯಪರಿಪೂರ್ಣ,
ಲಿಂಗವೆಂಬುದು ಸರ್ವ ಲೋಕೋತ್ಪತ್ತಿಗೆ ಕಾರಣ,
ಲಿಂಗವೆಂಬುದು  ಸರ್ವತತ್ವ ಪುರಾಣ ನಿಜ ಚೈತನ್ಯವು,
ಲಿಂಗವೆಂಬುದು  ಜನ್ಮವರಿಧಿಯ ದಾಂ ಟಿಸುವ ಭ್ಯೇತ್ರವು;
ಲಿಂಗವೆಂಬುದು  ಶರಣರ ಹೃದಯದಲ್ಲಿ ಬೆಳಗುವ
ಜ್ಯೋತಿರ್ಮಯ ಲಿಂಗವು. ಇಂತಿ ಲಿಂಗದ ಮರ್ಮವನರಿದವನೆ
ಅರಿದವನು ನಿಜಗುರು ಸ್ವತಂತ್ರ ಸಿದ್ದಲಿಂಗೇ ಶ್ವರಾ...

'ಲಿಂಗ' ಅರ್ಥಾತ್ ಪರಮಾತ್ಮನ ಸರ್ವಕಾರಣ ನಿರ್ಮಲನು, ಅಂದರೆ ತಾನು ವಿಕಾರಕ್ಕೊಳಗಾಗದೆಯೇ ಎಲ್ಲವನು ಸೃಷ್ಟಿಸ ಬಲ್ಲ; ಎಲ್ಲಕ್ಕೂ ಆದಿ ಕಾರಣವಾದ ಮೂಲಶಕ್ತಿ ಅದು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ ಲಕ್ಷಣಗಳಿಂದ ಕುಡಿದುದು; ಸಕಲ ತತ್ವಗಳಿಗೆ ಆಶ್ರಯೀಭೂತವಾದುದು, ಚೈತನ್ಯ ಸ್ವರೂಪವು. ಇದು ಪರಕಾಶ ಸ್ವರೂಪವು. ಮಾತ್ರವಲ್ಲ ಹೃದಯ ಕಮಲದಲ್ಲಿ ಅಂಶರೂಪದಲ್ಲಿ ಆತ್ಮವಾಗಿ ನೆಲೆಸಿರುತ್ತದೆ.

"ಜನ್ಮ ವಾರಿಧಿಯ ದಾಂ ಟಿಸುವ ಭ್ಯೇತ್ರ" ಎಮಬಲ್ಲಿಗೆ ಲಿಂಗ ಪದವು ಉಪಾಸ್ಯ ವಸ್ತುವಾದ ಇಷ್ಟಲಿಂಗವನ್ನು ನಿರ್ದೇಶಿಸುತ್ತದೆ. ಮಾನವ ಜನ್ಮವೆಂಬ ಭಾವಸಗರವನ್ನ ದಾಟಲು ಇದು ಒಂದು ನಾವೆ ಎಂಬುದಾಗಿ ಪ್ರತಿಪಾದಿಸಲ್ಪಟ್ಟಿದೆ. ಈ ಮರ್ಮವನ್ನರಿತು ನಡೆದಾಗಲೇ ಓರ್ವನು ಶಿವನುಭಾವಿಯಾಗಬಲ್ಲ ಎನ್ನುತ್ತಾರೆ ಸ್ವತಂತ್ರ ಸಿದ್ದಲಿಂಗೇಶ್ವರ ರು.

ಹೀಗೆ ಎಲ್ಲಾ ವಚನಕಾರರು, ಪರಾತ್ಪರ ವಸ್ತುವನ್ನು ಲಿಂಗವೆಂದೂ, ಶಿವನೆಂದೂ, ಬಯಲು, ನಿರ್ಬಯಲೆಂದೂ, ಶೂನ್ಯ-ನಿಶೂನ್ಯ ವೆಂದು ಕರೆದಿದ್ದಾರೆ. ಈ ಬಯಲು ಅಥವಾ ಶೂನ್ಯವು ಏನೂ ಇಲ್ಲದ್ದು ಎಂಬರ್ಥದಲ್ಲಿ ಬಳಸಿಲ್ಲವೆಂಬುದನ್ನ ಗಮನಿಸಬೇಕು. ಯಾವ ದ್ವಂದ್ವಗಳು ಇಲ್ಲದೆ ತಾನೇ ತಾನಾಗಿರುವ ಅತೀತವಾದ ಶುದ್ದ ಇರಹು ಸತ್ ಎಂಬರ್ಥದಲ್ಲಿ ಉಪಯೋಗಿಸಿದ್ದಾರೆ. ಇಲ್ಲದಂತೆ ಇಲ್ಲದುದು ಬೌದ್ಧರ ಶೂನ್ಯವಾದರೆ. ಇಲ್ಲದಂತೆ ಇರುವುದು ಲಿಂಗಾಯತ ಧರ್ಮದ ಶೂನ್ಯವು. ಅದು ಪರಿಪೂರ್ಣ; ಅದನ್ನು ಅಂಗಳಕ್ಕಳವಡಿಸಿಕೊಳ್ಳುವುದು ಶೂನ್ಯದ ಸಂಪಾದನೆಯೂ. ಅದೇ ಲಿಂಗಾಯತ ಧರ್ಮದ, ಯೋಗದ ಗುರಿಯು  ಕೂಡ.

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗ;
ಆದಿ ಮಧ್ಯಾವಸಾನಗಳಿಲ್ಲದ ಸ್ವತಂತ್ರ ಲಿಂಗ;
ನಿತ್ಯ ನಿರ್ಮಳ ಲಿಂಗ;
ಅಯೋನಿ ಸಂಭವನಯ್ಯಾ, ನಮ್ಮ ಕೂಡಲ ಸಂಗಮದೇವರು...

ಬಸವಣ್ಣ ನವರು "ಲಿಂಗ" ಎಂಬ ಪದದ ತಾತ್ವಿಕ ಅರ್ಥವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಪರಮಾತ್ಮನು ಅಮೂಲ್ಯನು; ಬೆಲೆ ಕೆಟ್ಟ ಲಾರದವನು; ಯಾವುದೇ ಲೌಕಿಕ ಪ್ರಮಾಣಗಳಿಂದ ಸಾಧಿಸಿ ತೋರಿಸದ ಅಪ್ರಮಾಣನು; ಪಂಜೇಂದ್ರಿಯ ಗಳ ಅನುಭವಕ್ಕೆ ನಿಲುಕದ ಆಗೋಚರನು, ಹುಟ್ಟು ಅವಸಾನ ಇಲ್ಲದ, ಪರವಲಂಬಿ ಯಲ್ಲದ  ಸ್ವತಂತ್ರನು, ನಾಶವಿಲ್ಲದ ನಿತ್ಯನು; ಕಾಮ ಕ್ರೋಧಾದಿಗಳೇನು ಇಲ್ಲದ ನಿರ್ಮಲನು, ಅವನು ತಾಯಿತಂದೆಗಳಲ್ಲಿ ಹುಟ್ಟಿದವನಲ್ಲ, ಅಸಂಭವ ಅಜಾತ ಹೀಗೆ "ಲಿಂಗ" ಪದವು ನಿರ್ದೇಶಿವುವುದು ದೇವರನ್ನು, ಪರಾತ್ಪರ ಪರಬ್ರಹ್ಮವನ್ನು.

Wednesday, May 30, 2012

ಓಂ ಶ್ರೀ ಗುರುಬಸವ ಲಿಂಗಾಯ ನಮಃ ಮಂತ್ರದ ಅರ್ಥ. Meaning of Om Shri Guru Basavalingaya Namha Chant

ಓಂ ಶ್ರೀ ಗುರುಬಸವ ಲಿಂಗಾಯ ನಮಃ

ನಮ್ಮ ಫೇಸ್ ಬುಕ್ ನ ಎಲ್ಲಾ ಶರಣ ಬಂಧುಗಳಿಗೆ ಶರಣು ಶರಣಾರ್ತಿಗಳು, ಶರಣರೇ ನಿಮಗೆ ಗೊತ್ತಿರುವ ಹಾಗೆ ಎಲ್ಲಾ ಲಿಂಗಾಯತ ಧರ್ಮೀಯರು ಓಂ ಶ್ರೀ ಗುರುಬಸವ ಲಿಂಗಾಯ ನಮಃ ಎಂಬ ಪವಿತ್ರ ಮಂತ್ರವನ್ನ ಬಳಸುತ್ತೇವೆ ಆದರೆ ಆ ಮಂತ್ರದ ಅರ್ಥ ಹಾಗೆ ಉದ್ದೇಶ ಬಹಳಷ್ಟು ಮಂದಿಗೆ ಗೊತ್ತಿಲ್ಲ, ಇದರ ಅರ್ಥವನ್ನ ವಿವರಿಸೋ ಪ್ರಯತ್ನ ಇದಾಗಿದೆ.

ಈ ಮಂತ್ರವನ್ನ ದ್ವಾದಶ ಮಂತ್ರ ವೆಂದು ಕರೆಯಲಾಗುತ್ತೆ. ಲಿಂಗಾಯತ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಮಂತ್ರ ಇದಾಗಿದೆ , ಇದರ ಅರ್ಥ ವೆಂದರೆ ಓಂಕಾರ ಸ್ವರೂಪಿಯಾದ, ಸೃಷ್ಟಿ, ಸ್ಥಿತಿ, ಲಯಗಳ ಕಾರಣ ಕರ್ತೃ ವಾದ ಪ್ರಾಣವ ಸ್ವರೂಪಿಯಾದ ಪರಮತ್ಮನಾದ ಲಿಂಗದೇವನಿಗೇ ನಮಿಸುತ್ತೇನೆ ಎನ್ನುವಂತಾದ್ದು, ಅರ್ದ ಭಾಗದಲ್ಲಿ ವ್ಯಕ್ತವಾದರೆ. ಉಳಿದಾರ್ದ ಭಾಗದಲ್ಲಿ ಓಂಕಾರ ಪ್ರತಿನಿಧಿಯಾಗಿ ಬಂದಿರುವ ಬಸವಣ್ಣನಿಗೇ ನಮಿಸುತ್ತೇನೆ ಎಂಬುದಾಗಿದೆ .

ಓಂ ಈ ಸ್ವರ ಎರಡು ಮಂತ್ರಗಳಿಗೆ ಸಮನಾಗಿದೆ., ಶ್ರೀ ಗುರು ಬಸವ ಎಂಬುದು ಬಸವಣ್ಣ ನವರಿಗೆ ಸಂಭಂದ ಪಟ್ಟ ಭಾಗಾವಾದರೆ, ಲಿಂಗಾಯ ಎಂಬುದು ಸೃಷ್ಟಿಕರ್ತನ ಕುರುಹಾದ ಲಿಂಗದೇವನಿಗೇ ಸಂಭಂದಿಸಿದ್ದುದಾಗಿದೆ. ಗುರು ಬಸವಣ್ಣವರು ಈ ಧರ್ಮಕ್ಕೆ ತಾಯಿ ಇದ್ದ ಹಾಗೆ, ಸುರ್ಷ್ಟಿಕರ್ತ ಪರಮಾತ್ಮನು ತಂದೆ ಇದ್ದ ಹಾಗೆ ಅದ್ದರಿದ ಈ ಎರಡನ್ನು ಸೇರಿಸಿ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಎಂಬ ಘನ ಮಂತ್ರವನ್ನ ರಚಿಸಲಾಗಿದೆ.

ಚನ್ನ ಬಸವಣ್ಣವರು ಈ ವಿಷಯದ ಕುರಿತಾಗಿ ಬಹಳ ಮಾರ್ಮಿಕ ವಾಗಿ ತಮ್ಮ ವಚನದಲ್ಲಿ ಹೇಳಿದ್ದರೆ.
ಅಯ್ಯ ಅಯ್ಯ ಎಂದರೆ ಅಯ್ಯ ಓ ಎನ್ನದೆ ಮಾಳ್ಪನೆ

ಅವ್ವೆ ಅವ್ವೆ ಎಂದರೆ ಅವ್ವೆ ಓ ಎನ್ನದೆ ಮಾಳ್ಪಳೆ
ನಾನು ಬಸವಲಿಂಗ ಬಸವಲಿಂಗ ಎಂದು ಬಯಲಾದೆನಯ್ಯ ಕೂಡಲ ಚೆನ್ನಸಂಗಮದೇವ.

ನಮ್ಮ ಶರಣರು ಪರಮಾತ್ಮನನ್ನು ವಿಶೇಷವಾಗಿ ಬಸವ ಲಿಂಗ ಎಂದೇ ಕರೆದಿದ್ದಾರೆ, ಅದ್ದರಿದ ಓಂಕಾರದ ಸ್ವಾರೂಪನೆ ಆಗಿರುವ ಲಿಂಗದೇವನೇ ನಿಮಗೆ ನಮಿಸುತ್ತೇನೆ, ಓಂಕಾರದ ಪ್ರತಿನಿಧಿಯಾದ ಬಸವಣ್ಣ ನಿಮಗೆ ನಮಿಸುತ್ತೇನೆ ಎಂಬುದು ಇದರ ಮೂಲ ಅರ್ಥ ವಾಗಿದೆ.


ಶರಣ ಬಂಧುಗಳೇ ನಿಮ್ಮಲಿ ಒಂದು ಮನವಿ, ಮಧುವೆ, ಗೃಹ ಪ್ರವೇಶ, ಸಭೆ ಸಮಾರಂಭಗಳ ಆಮಂತ್ರಣ ಪತ್ರಿಯಕೆಯಲ್ಲಿ ಓಂ ಶ್ರೀ ಗುರುಬಸವ ಲಿಂಗಾಯ ನಮಃ ಎಂದು ಮುದ್ರಿಸಿ, ಸಮಾನ್ಯವವಾಗಿ ಮನೆದೇವರ ಅಥವಾ ಬೇರೆ ದೇವರ ನಾಮದ ಜೊತೆ ಪ್ರಸನ್ನ ಎಂದು ಸೇರಿಸಿ ಮಲ್ಲೇಶ್ವರ ಪ್ರಸನ್ನ ಅಂತಲ್ಲೋ . ಗಂಗಾಧರೇಶ್ವರ ಪ್ರಸನ್ನ ಅಂತಲೋ ಹಾಕುವ ಮುದ್ರಿಸುವ ಬದಲು ಈ ಮಂತ್ರವ ಮುದ್ರಿಸಿದರೆ ಬಹಳ ಅರ್ಥಪೂರ್ಣ ಹಾಗೂ ಸಮಂಜಸವಾಗಿರುತ್ತೆದೆ.

ಶರಣು ಶರಣಾರ್ತಿಗಳು,




Om Shri Guru Basavalingaya Namha
I offer my Sharanu Sharanarthi to all sharan relatives of face book, as all of us know Lingayat’s are using Om Shri Guru Basavalingayanamha chant, but most of the people don’t know the meaning, intention of the hymn. This is a small effort to explain the same.
This hymn is called 12 lettered chant. This is very holly chant of the Lingayat religion. Meaning of the chant is I bow to the GOD Lingadeva who is the reason for Generator, Organizer and destroyer.second half of says I bow to the Basavanna the representative of Omkar.
Om is common to the both parts of the hymn. Shri guru basava is related to Basavanna and Lingaya is related to the Lingadeva the representation of the creator. Guru Basavanna is like mother to the religion and the creator God is as father. The hymn om sri guru basavalingaya namha is constructed with both.
Chennabasavanna gave a very beautiful vachana saying in this regard
If called father, cant he reply?
If called mother, cant she reply?
O Lord Kudala chennasangayya I got oneness by say Basavalinga Basavalinga.
Our sharana call GOD specially as Basavalinga, basic mean of the chant is, bow to you Guru Basavanna the Representative of the GOD representative of the God.
Request to all the sharana’s, while printing the invitation of wedding, house blessing, conference and etc, it would be more meaningful and relevant if print the chant Om Shri Guru Basavalingaya Namha as first line instead to print the names of the subtle gods.
Sharanu sharanrthi,

Sunday, April 17, 2011

ಇಷ್ಟಲಿಂಗ ಪೂಜೆ ಮೂರ್ತಿ ಪೂಜೆ ಅಲ್ಲ ... worship of Istaliga (Istalingapuje) is not Idol worship

ಜನರಲ್ಲಿ ಇಷ್ಟಲಿಂಗ ಪೂಜೆ ಅನ್ನೋದು ಒಂದು ಮೂರ್ತಿಪೂಜೆ ಅನ್ನೋ ಕಲ್ಪನೆ ಬೇರೂರಿದೆ, ಇದು ಸುಶಿಕ್ಷಿತರನ್ನು ಬಿಟ್ಟಿಲ್ಲ, ಇದು ತಪ್ಪು ತಿಳುವಳಿಕೆಯಾಗಿದೆ. ಮೂರ್ತಿಪೂಜೆ ಮಾಡಬೇಕೋ ಬಿಡಬೇಕೋ ಅನ್ನೋ ಗೋಜಿಗೆ ಹೋಗದೆ ಇಷ್ಟಲಿಂಗ ಪೂಜೆಯು ಮೂರ್ತಿಪೂಜೆ ಅಲ್ಲ . ಇಷ್ಟಲಿಂಗವು ಮೂರ್ತಿ ಎಂಬ ಭ್ರಮೆಯನ್ನ  ಪರಿಹರಿಸೋದು ಈ ಬರಹದ ಮುಖ್ಯ ಗುರಿ. ಲಿಂಗಾಯತ  ಅಥವಾ ಬಸವಧರ್ಮಕ್ಕೆ ಮೂರ್ತಿ ಪೂಜೆಯ ಅವಶ್ಯಕತೆ ಇಲ್ಲಾ ಅನ್ನೋವಾದ  ೧೦೦ ಕ್ಕೆ ೧೦೦ ಪಟ್ಟು ಸತ್ಯ. ಆದರೆ ಇಷ್ಟಲಿಂಗ ಪೂಜೆ ಮೂರ್ತಿ ಪೂಜೆಗೆ ಹೊರತಾದುದು, ಇದು ಲಿಂಗಾಯತ ಧರ್ಮಿಯರ ಉಪಾಸ್ಯ ವಸ್ತು , ನಿರಾಕಾರ ನಿರಯವನಾದ ಪರಮಾತ್ಮನ ಸಾಕಾರ; ಗೋಲಾಕಾರದ, ವಿಶ್ವದ ಆಕಾರದಲ್ಲಿರುವ ಸಾಕಾರ ರೂಪದ, ಸಾಮಾಜಿಕ ಸಮಾನತೆ ಸ್ಥಾಪನೆಯ ಕುರುಹೇ ಹೊರತು ಯಾವುದೊ ವ್ಯೆದಿಕ ಪರಂಪರೆಯ ಅಥವಾ ಧ್ಯೆವಿಪುರುಶನ ಕುರುಹಲ್ಲ ಇಷ್ಟಲಿಂಗ.

೧. ಇಷ್ಟಲಿಂಗಕ್ಕೆ ಸರ್ವಸಮ್ಮತ, ವ್ಯೆಜ್ಞಾನಿಕ, ತಾತ್ವಿಕ  ಹಿನ್ನೆಲೆ ಇದೆ, ಇದು ನಿರ್ಗಣೋಪಾಸನೆಗೆ ಸಾದನ, ನಿರ್ಗುಣದ ಸಾಕಾರ, ಆದರೆ ಮೂರ್ತಿ ಪೂಜೆಯು ಸಗುಣದ ಸಾಕಾರ ವಿಷ್ಣು, ಶಿವ, ರಾಮ ಮೊದಲಾದ ವ್ಯಕ್ತಿ  ಮೂರ್ತಿಗಳಿಗೆ ನಿರಾಕಾರ ಕಲ್ಪನೆ ಕೊಡಲು ಬರೋದಿಲ್ಲ ಅಂತೆಯೇ ವ್ಯೆಜ್ಞಾನಿಕ ದೃಷ್ಟಿಯಲ್ಲಿ ಯಾವಾ ಬೆಲೆಯೂ ಇಲ್ಲಾ.

೨. ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ ಇದಕ್ಕೆ ಬಸವಲಿಂಗ ಶರಣರ ಪದ್ಯವೇ ಸಾಕ್ಷಿ.
ಮುನ್ನನಾದಿಯ ಪರಾತ್ಪರ ನಿರಂಜನ ಶರಣ
ತನ್ನ ಹುರ್ತ್ಕಮಲದ ಪರಂಜ್ಯೋತಿ ಲಿಂಗವನು
ಭಿನ್ನವಿಲ್ಲದೆ ವಾಮಕರಕಂಜದೊಳು ಪಿಡಿದು ತನ್ನ ತಾನರ್ಚಿಸುತಿಹ !
ಹೀಗೆ ಇಷ್ಟಲಿಂಗ ಪೂಜೆ  ಸ್ವರೂಪ ಪೂಜೆ , ಮೂರ್ತಿ ಪೂಜೆ ಪ್ರತಿಕೋಪಾಸನೆ ಅಂದರೆ ವ್ಯಕ್ತಿಯ ಪ್ರತೀಕವಾಗಿ ಮೂರ್ತಿಯನ್ನ ಮಾಡಿ ಪೂಜಿಸುವುದು. ಇದು ಇಷ್ಟಲಿಂಗ ಪೂಜೆಯಂತೆ ಅಂತರಾತ್ಮನ ಪೂಜೆಯಾಗಿರದೆ ಯಾವುದೊ ವ್ಯಕ್ತಿಯ ಮೂರ್ತಿ ಪೂಜೆ ಆಗಿರುತ್ತೆ.

೩. ಇಷ್ಟಲಿಂಗ ಪರಮಾತ್ಮನ ಕುರುಹಿನ ಪೂಜೆ,
ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ
 ಈ ವಚನದಿಂದ ಇಷ್ಟಲಿಂಗವು ಪರಮ ನಿರಂಜನದ ಕುರುಹು ಎಂದೂ, ಇಷ್ಟಲಿಂಗ ಪೂಜೆ ಸ್ವರೂಪ ಪೂಜೆಯ ಸಿದ್ದವಸ್ತುವಾಗಿದೆ, ಪರಶಿವನ (ಸೃಷ್ಟಿಕರ್ತನ) ಇರುಹಿನ ನೆಲೆಯ  ತೋರುವ ಕುರುಹಿದು.

ವ್ಯೆತ್ಯಾಸಗಳು
ಇಷ್ಟಲಿಂಗ ಪೂಜೆ                                                            ಮೂರ್ತಿ ಪೂಜೆ

ನಿರ್ಗುಣ ಸಾಕಾರ ಪೂಜೆ                                          ಸಗುಣ ಸಾಕಾರ ಪೂಜೆ
ಪರಮಾತ್ಮನ ಕುರುಹಿನ ಪೂಜೆ                                  ಮಹಾತ್ಮರ ಮೂರ್ತಿಯ ಪೂಜೆ
ಮುಕ್ತಿ ದಾತನ ಪೂಜೆ                                              ಮುಕ್ತಾತ್ಮನ ಪೂಜೆ
ಎಂದಿಗೂ ಮಂಗಲದಾತನ ಪೂಜೆ                              ಕೆಲವೊಮ್ಮೆ  ತೋರಿಕೆಯ ಪೂಜೆ
ಶಿವದ್ವ್ಯೆತ ಭಾವನೆಯ ಪೂಜೆ                                     ದ್ವ್ಯೆತ ಭಾವನೆಯ ಪೂಜೆ
ಅರ್ಚನೆ ಅನುಸಂಧಾನಗಳಿಗೆ (ಯೋಗಕ್ಕೆ) ಅವಕಾಶವಿದೆ    ಕೇವಲ ಅರ್ಚನೆ ಮಾತ್ರ
ಸಾಮರಸ್ಯದ ಸಂತೃಪ್ತಿಯಿದೆ                                     ಸಾಮರಸ್ಯವಿಲ್ಲ
ವಿಶ್ವದಕರದಲ್ಲಿ ಪೂಜೆ                                             ವ್ಯಕ್ತಿ ಅಥವಾ ಪ್ರಾಣಿಗಳ ಆಕಾರದಲ್ಲಿ ಪೂಜೆ
ಲಿಂಗ ಭೇದವಿಲ್ಲ                                                   ಲಿಂಗಭೇದವಿದೆ
ಸುಜ್ಞಾನಯುತ ಸದ್ಭಕ್ತಿ ಸಮ್ಮಿಲನ                               ಕೆಲೊವೊಮ್ಮೆ ಮುಢಭಕ್ತಿಯ  ಪ್ರೇರಣೆ
ಏಕದೆವೋಪಾಸನೆ                                                ಬಹುದೇವೋಪಾಸನೆ
ಅಂಗದ ಮೇಲೆ ಅಂಗ್ಯೆಯಲಿಟ್ಟು ಪೂಜಿಸುವಂತದ್ದು           ಗುಡಿ, ದೇಗುಲ, ಮಂಟಪ ದಲ್ಲಿಟ್ಟು ಪೂಜಿಸುವಂತದ್ದು..


In general and even at well-educated a misconception is going on that worship of Istaliga (Istalingapuje) is one type of Idol worship. There is not necessity to think about idol worship because Istalinga worship is not at all Idol worship. Main intension of this writing is to clear off the illusion of Istalinga worship as Idol worship. It is cent percent true Idol worship is not at all necessary to Lingayat religion or Basava Dhrama there. Italinga is not a symbol of divine personality or Vedic culture; it is symbol of inception social equality. Istalinga is nothing but representation of formless God; it is the only worship able by Lingayat religious people of the shape of round as universe.
  1. Istalinga has universal acceptable, scientific, ethical background; it is instrument for worship formless, form of formless. There is no significance in the scientific view for the worship of Individuals such as Vishnu, Shiva, Rama and others, as they are unable to give concept of formless.

2. Worship of Istalinga is worship of being, for this we can refer the following Vachana of Basavalinga
Real Sharana who know the supreme reality,
Who worship himself in his own hand the Istalinga as light of the heart without any difference!
So Istalinga worship is worship of existence of self, Idol worship is worship of someone else. Idol worship never matches the Istalinga Worship which is the worship of inners self only.

3. Worship of Istalinga is worship of being, for this we can refer the following Vachana of Basavalinga
Real Sharana who know the supreme reality,
Who worship himself in his own hand the Istalinga as light of the heart without any difference!
So Istalinga worship is worship of existence of self, Idol worship is worship of someone else.
Idol worship never matches the Istalinga Worship which is the worship of inners self only.

Difference between Istalinga worship and Idol worship

Istalinga worship                                                    Idol worship
Worship of formless in form                                  worship of form
Worship of symbol of supreme                              worship of the Idol of hero’s
Worship of realization provider                            Worship of persons achieved
Worship of always welfare provider                      some Worship for show put up
Worship of Shivadvaita (dual with shiva)              Worship of Dvaita (Dual)
It has provision to Yoga (with worship)                 it has only option of worship
Has bliss of oneness                                            oneness is not possible
Worship in the shape of world                              Worship in form, man animal etc.,
No discrimination of Gender                                 bifurcates by Gender
Mixture of knowledge and devotion                     superstitious devotion
Monotheism                                                        Polytheism
Worshipped on body                                           Worshipped at temple and etc.,

Friday, April 9, 2010

ಶರಣರ ಅನುಭಾವದ ನುಡಿಗಳನ್ನ ವಚನ ನಿರ್ವಚನಗಳ ಮೂಲಕ ಪ್ರಚುರಪಡಿಸುವ ಒಂದು ಸಣ್ಣ ಪ್ರಯತ್ನ ಇದಾಗಿದೆ...

ಕಾಲು ಗಳೆರಡು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ,
ಬಂಡಿಯ ಹೊಡೆವವರ್ಯೆವರು ಮಾನಿಸರು
ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ,
ಅದರಿಚ್ಚೆಯ ನರಿದು ಹೊಡೆ ಯದಿರ್ದಡೆ
ಅದರಚ್ಚು ಮುರಿದಿತ್ತು ಗುಹೇಶ್ವರಾ...

ದೇಹ ಒಂದು ಬಂಡಿ. ಕಾಲುಗಳೇ ಚಕ್ರಗಳು, ಇದನ್ನು ನಡೆಸುತ್ತಿರುವವರು ಐದು ಜನ ವಿಚಿತ್ರವಲ್ಲವೇ! ಆದರೂ ನಿಜ, ಈ ಐದು ಜನ ಮಾನಿಸರೆ ಪಂಜೆಂದ್ರಿಯಗಳು, ಆತ್ಮ ಎಂಬ ಮಾಲೀಕ ಈ ಬಂಡಿಯಲ್ಲಿ ಪ್ರಯಾಣ ಮಾಡತ್ತಾ ಇದ್ದಾನೆ, ಪಾಪ ಈ ಮಾಲೀಕ ಬಹಳ ಸಜ್ಜನ, ಹಠ ಹಿಡಿಯೋಲ್ಲ, ಗಲಾಟೆ ಮೊದಲೇ ಇಲ್ಲ, ಹೀಗಾಗಿ ಐದು ಜನ ಮಾನಿಸರಿಗೆ ಹೇಳೋರಿಲ್ಲ ಕೇಳೋರಿಲ್ಲ, ಅವರದ್ದೇ ರಾಜ್ಯ, ಅದು ಅಲ್ಲದೆ ಮನಸ್ಸೆಂಬ ಸುಳ್ಳು ಮಾಲೀಕ ನಿಜ ಮಲಿಕನಿಗಿಂತಲೂ ಹೆಚ್ಚು ಗಲಾಟೆ ಮಾಡಿ ತನ್ನ ಶಿಷ್ಯರಿಗೆ, ಅಂದ್ರೆ ಪಂಜೇಂದ್ರಿಯಗಳಿಗೆ ಹೆಚ್ಚು ಅಧಿಕಾರ ಕೊಟ್ಟಿದ್ದಾನೆ, ಇಂದ್ರಿಯಗಳು ಮನಸ್ಸೇ ನಿಜಮಾಲಿಕನೆದು ತಿಳಿದು ಖುಷಿಯಾಗಿ ಬಂಡಿಯನ್ನ ನಡೆಸುತ್ತವೆ. ಅದು ಅಲ್ಲದೆ "ಒಬ್ಬರಿಗೊಬ್ಬರು ಸಮನಿಲ್ಲಾ" ಈ ಇಂದ್ರಿಯಗಳ ಕಚ್ಚಾಟದಲ್ಲಿ ನಿಜಮಾಲಿಕನ ಇಚ್ಛೆ ಅರ್ಥವೇ ಆಗುವದಿಲ್ಲ. ಮಾಲೀಕನ ಇಚ್ಚೆ ಅರ್ಥ ಮಾಡಿಕೊಳ್ಳದಿದ್ದರೆ 'ಅದರಚ್ಚು ಮುರಿಯಿತ್ತು' ಬಂಡಿಗೆ ಅಚ್ಚೆ ಆಧಾರ ಸ್ಥಾನ ಅದೇ ಮುರಿಯಿತೆಂದರೆ, ಬಂಡಿಯ ಕಥೆಯೇ ಮುಗಿದಂತೆ. ಆತ್ಮ ಸುಖವ ಮರೆತು, ಇಂದ್ರಿಯಗಳ ಸುಖಕ್ಕೆ ಬಲಿಯಾಗಿ ಲೋಲುಪ ಜೀವನವೆಂಬ ವ್ಯಾಧಿಯಿಂದ ದೇಹವೆಂಬ ಬಂಡಿಯನ್ನ ರೋಗಗಳಿಂದ ಹಾಳು ಮಾಡುತ್ತ ಇದ್ದಾನೆ.


ಸಂಬಂಧ ಅಸಂಬಂಧವೆಂದು
ಹೆಸರಿಟ್ಟು ಕೊಂಡು ನುಡಿವಿರಿ
ಸಂಬಂಧವಾವುದು? ಅಸಂಬಂಧವಾವುದು?
ಬಲ್ಲಡೆ ನೀವು ಹೇಳಿರೆ !
ಕಾಯ ಸಂಬಂಧ , ಜೀವ ಸಂಬಂಧ, ಪ್ರಾಣಸಂಬಂಧ
ಇಂತೀ ತ್ರಿವಿಧ ಸಂಬಂಧವನರಿದಡೆ
ಆತನೆ ಸಂಬಂಧಿ ಕಾಣಾ ಗುಹೇಶ್ವರಾ...


ಲಿಂಗ-ಅಂಗಗಳ ಸಂಭಂಧ ಮತ್ತು ಅಸಂಬಂಧಗಳನ್ನೂ ಕುರಿತು ಧಾರಾಳವಾಗಿ ಮಾತಾನಾಡುತ್ತಾರೆ ಜನ. ಸಂಬಂಧ ಯಾವುದು? ಅಸಂಬಂಧ ಯಾವುದು? ಇವುಗಳನ್ನು ಪರಾಮರ್ಶಿಸಿ ಅರಿಯಬೇಕು. ನಿಜವಾಗಿಯೂ ನೋಡಿದರೆ ಅಂಗ (ಕಾಯ)ವೆ ಪೀಠ, ಆ ಅಂಗದೊಳಗಿರುವ ಜೀವವೇ ಲಿಂಗ. ಆ ಜೀವಲಿಂಗದೊಳಗೆ ಶಿವನ ಕಳೆ ಹುದುಗಿದೆ. ಅದುವೆ ಪ್ರಾಣಲಿಂಗ. ಈ ಮೂರಕ್ಕೂ ಅಗಲದ ಸಂಬಂಧ. ಆ ಸಂಭಂಧವುಳ್ಳವನೆ ಪ್ರಾಣಲಿಂಗ ಸಂಬಂಧಿ.



ಹೊನ್ನು ಮಾಯೆಯೆಂಬರು, ಹೆಣ್ಣು ಮಾಯೆಯೆಂಬರು,
ಮಣ್ಣು ಮಾಯೆಯೆಂಬರು ;
ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ.

ಮನದ ಮುಂದಣ ಆಸೆಯೇ ಮಾಯೆ ಕಣಾ ಗುಹೇಶ್ವರಾ...


ಸಾಮಾನ್ಯವಾಗಿ ಹೊನ್ನು, ಹೆಣ್ಣು ಮತ್ತು ಮಣ್ಣುಗಳು ಮಾಯೆಯೆಂದು ಜನ ತಿಳಿಯುತ್ತಾರೆ. ನಿಜವಾಗಿ ಯೋಜಿಸಿದರೆ ಜೀವನನ್ನು ಭಾವದ ಬಂಧನಕ್ಕೆ ಒಳಪಡಿಸುವುದು, ತನ್ನ ನಿಜ ಸ್ವರೂಪವನ್ನ ಮರೆಮಾಚುವುದು, ಹೊನ್ನು ಅಲ್ಲ, ಹಣ್ಣು ಅಲ್ಲ, ಮಣ್ಣು ಅಲ್ಲ, ಅದು ಮನಸ್ಸಿನೊಳಗಿರುವ ಆಯಾ ವಿಷಯಗಳ ಆಸೆ. ಆದ್ದರಿಂದ ಆ ಆಸೆಯೇ ಮಾಯೆಯೆಂದು ಅಲ್ಲಮರು ಹೇಳಿದ್ದಾರೆ.


ಅರಿವಿನಲ್ಲಿ ಉದಯಿಸಿದ ಮರುಹು
ನಷ್ಟವಾಗಿದ್ದ
ಶರಣನ ಪರಿಯನರಿಯಲು ಉಂಟೆ ?
ಗತಿಯನುರಸಲು ಉಂಟೆ ?

ಶಿಶು ಕಂಡ ಕನಸಿನಂತ್ತಿಪ್ಪರು ಗುಹೇಶ್ವರಾ,

ನಿಮ್ಮ ಶರಣರು. ಶಿವಯೋಗವು ಒಂದು ಅರಿವಿನ ಸಾಧನೆ. ಆ ಸಾಧನೆಯ ಕೊನೆಕೊನೆಯ ಹಂತದಲ್ಲಿ ಅಭೇದಜ್ಞಾನವು ಉದಿಸುತ್ತದೆ. ಅದರ ಪರಿಣಾಮವಾಗಿ ದೇಹಾತ್ಮ ಭಾವಕ್ಕೆ ಕಾರಣವಾದ ಮರುಹು ನಷ್ಟವಾಗುತ್ತದೆ. ಆ ಸ್ಥಿತಿಯಲ್ಲಿ ನೆಲೆಸಿರುವ ಶರಣನು ಲಿಂಗಭಿನ್ನವಿಟ್ಟು ಅರಿಯಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸಾಧ್ಯ-ಸಾಧಕ ಎಂಬ ಭೇಧವೆಲ್ಲ. ಶಿಶು ಕಂಡ ಕನಸಿನಂತೆ ಅವನ ನಿಲುವು ; ಶಬ್ದಕ್ಕೆ ನಿಲುಕದುದು, ಅದನ್ನು ಕರುಹಿಟ್ಟು ಹೇಳಲು ಬಾರದು. ಅದೊಂದು ಶಬ್ದ ಮುಗ್ದ ಸ್ಥಿತಿ.

ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನೆಸಿಕೊಳ್ಳಬಹುದೆ ?

ಆ ಠಾವು ಹಿಂಗಿದಡೆ ಭಂಗಿತನು ಕಂಡಾ!

ಅಂತರಂಗ ಒಡಗೂಡಿದುದನರಿಯರು

ಗುಹೇಶ್ವರನೆಂಬುದು ಮೀರಿದ ಘನವು...

ಕಣಕಾಲಿನ ಗೆಜ್ಜೆಯ ಕಟ್ಟಿಕೊಂಡು ಜಂಗಮನಗಿಹೆನೆಂದು ಹೇಳಿದರೆ ಅದನು ಒಪ್ಪಬಹುದೇ ? ಆ ಗೆಜ್ಜೆ ತಪ್ಪಿಹೋದರೆ ಆ ಜಂಗಮನು ಭಂಗಿತ. ವೇಷದಾರಿ ಜಂಗಮರು ಜಂಗಮನಾಗುವ ಅಂತರಂಗದ ಸಧನೆಯನರಿಯರು. ಇಂದ್ರಿಯಗಳ ಹರಿದಾಟ ನಿಲ್ಲಬೇಕು. ವಿಷಯವಿರಾಗ ಅಂಗವಿಸಬೇಕು. ಮನವು ಲಿಂಗದ ನೆನಹಿನಲಿ ಒಂದಾಗಬೇಕು. ಇಂಥ ಜಂಗಮಸ್ಥಿತಿಯನು ಪಡೆಯದೆ ಬರಿವೇಶದಿಂದ ಜಂಗಮರಾದೆವೆಂಬುದು ಹಾಸ್ಯಾಸ್ಪದ. ಪರಮಾತ್ಮ ವೇಷಗಳ ಆಳುವಿಗೆ ಸಿಲುಗುವನಲ್ಲ. ದೃಷ್ಟಿಗೆ ಕಾಣುವ, ಬುದ್ಧಿಗೆ ಅಳವಡುವ, ಭಾವಕ್ಕೆ ನಿಲುಕುವ ಎಲ್ಲವನು ಮೀರಿ ನೆಲೆಸಿದವ ದೇವ. ಅವನನ್ನರಿತ ಶರಣ ನಿಜ ಜಂಗಮ.

ನೀನಿಲ್ಲದ ಭೂಮಿಯ ಮೇಲೊಂದು ಗಿಡು ಹುಟ್ಟಿತ್ತು :

ಸಿಡಿಲು ಬಣ್ಣದವೆಂಟು ಹೂವಾದವು ನೋಡಾ ;
ಕೊಂಬಿನೊಳಗೆ ಫಲದೋರಿ ಬೇರಿನೊಳಗೆ ಹಣ್ಣಯಿತ್ತು.

ಆರೂ ಕಾಣದ ಠಾವಿನಲ್ಲಿ
ತೊಟ್ಟು ಬಿಟ್ಟು
ಬಿದ್ದ ಹಣ್ಣ ಮೆದ್ದುವನಲ್ಲದೆ ಶರಣನಲ್ಲ, ಗುಹೇಶ್ವರಾ...

ಜಡಭಾವವಿಲ್ಲದ ಶುದ್ದ ಹೃದಯವೇ ಭೂಮಿ. ಅಲ್ಲಿ ಹುಟ್ಟಿದುದು ಭಕ್ತಿವೃಕ್ಷ. ಅಷ್ಟ, ಸದ್ಗುಣಗಳು. ಆ ಪುಷ್ಪಗಳು. ಆ ಪುಷ್ಪ ಶಾಖೆಯಲ್ಲಿ ಕಾಣಬಂದುದು ಶಿವಜ್ಞಾನವೆಂಬ ಕಾಯಿ, ಆ ಕಾಯಿಯು ಶಿವೋಹಂ ಎಂಬ ಅನುಸಂಧಾನದಿಂದ ಮಾಗಿ ಶಿವನುಭೂತಿಯೆಂಬ ಹಣ್ಣಾಗುತ್ತದೆ, ಶರಣ ಸ್ಥಲದಲ್ಲಿ. ಆ ಸ್ಥಲವು ಸಾಧಕ ನಿಗಲ್ಲದೆ ಯಾರಿಗೂ ನಿಲುಕದ ಠಾವು. ಅಲ್ಲಿ ಶರಣ ಆ ಅನುಭೂತಿ ಫಲದಿಂದ ರಸವನ್ನು ಮನಸಾರೆ ಸವಿಯುತ್ತಾನೆ. ಆ ಸವಿಯ ಪರಮ ಸಂತೋಷದಲ್ಲಿ ಮನಮಗ್ನನಾಗುತ್ತಾನೆ. ಅವನದು ಆನಂದೋನ್ಮಾದ ಸ್ಥಿತಿ. ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ, ಮುಂದೆ ಬಂದಿಪ್ಪಳು ನೋಡಾ. ಇಂತೆ ರೆಡಿಲ್ಲದ ಕೂಸನೆತ್ತ ಬಲ್ಲಡೆ, ಆತನೇ ಲಿಂಗ್ಯೆ ಕ್ಯ ಗುಹೇಶ್ವರಾ. ಆಸೆಗೂ ರೋಶಕ್ಕು ಅನ್ಯೋನ್ಯ ಸಂಬಂಧ, ಮಗು ತಯೇಯಷ್ಟು. ಆಸೆಗೆ ಏನಾದರೂ ಭಾದೆ ಬಂದಿತೋ ರೋಷ ಅದನ್ನು ರಕ್ಷಿಸಲು ಧಾವಿಸುತ್ತದೆ. ಆಸೆಗೆ ರೋಷದ ಅಲಂಬನ, ರೋಷಕ್ಕೆ ಆಸೆಯ ಮೇಲೆ ಅಷ್ಟು ಅನುರಾಗ. ಈ ಲೌಕಿಕ ಅಸೆ-ರೋಶಗಳ ಸೊಂಗಿಲ್ಲದ ಮಧುರಭಾವವೇ ಭಕ್ತಿ. ಅದು ಸರ್ವಪ್ರಿಯ. ದೇವನಿಗೂ ಕೂಡ. ಇಂಥ ಭಕ್ತಿಯನ್ನು ಎತ್ತಿ ಹೃದಯಕಮಲದಲಿರಿಸಿ ಒಲ್ಯೆಸುವವ ಭಕ್ತ. ಅವನಿಗೆ ಲಿಂಗ ಸಮರಸತೆ ಸಹಜ ಲಭ್ಯ, ಆರು ಹೆಚ್ಚೇಗಳನಿರಿಸಿದನೋ ಲಿಂಗಸಮರಸವನನುಭಾವಿಸುವ, ಲಿಂಗ್ಯೆ ಕ್ಯ ನೆನಿಸುವ. ಭಕ್ತಿಗೂ ಮುಕ್ತಿಗೂ ಅಷ್ಟು ಸಾಮೀಪ್ಯ.


ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು;
ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು :
ಇದಾರಕ್ಕೆ ಆರಕ್ಕೆ ಇದೇನಕ್ಕೆ ಏನಕ್ಕೆ ?

ಮಾಯದ ಬೇಳುವೆ, ಹುರುಳಿಲ್ಲ.

ಕೊಂದು ಕೂಗಿತ್ತು, ನೋಡಾ ಗುಹೇಶ್ವರಾ...


ಯಾರದೋ ಸಂಪತ್ತಿಗೆ ಯಾರೋ ಚಿಂತಿಸುತ್ತಾರೆ. ಯಾರದೋ ಬಡತನಕ್ಕಾಗಿ ಮತ್ತೆ ಯಾರೋ ಮರುಗುತ್ತಾರೆ. ಆಲೋಚಿಸು, ಇದೆಲ್ಲ ಯಾರದು ಹೇಳು, ಇದೆಲ್ಲ ಏನು, ಇದರ ಸ್ವರೂಪವೇನು? ಎಲ್ಲವೂ ಮಾಯೆಯ ಭ್ರಾಂತಿ, ಹೀಗೆ ಮರುಗುವಲ್ಲಿ, ಚಿಂತಿಸುವಲ್ಲಿ ಹುರುಳಿಲ್ಲ. ಈ ಜೀವಾತ್ಮ ದೇಹಭಾವಿಯಾಗಿ ವಿಷಯಗಳ ವ್ಯಾಮೋಹದಲ್ಲಿ ಸಿಲುಕಿ ದ್ಯೆಹಿಕ ಮತ್ತು ಭೌತಿಕ ಸಿರಿಗಾಗಿ ಚಿಂತಿಸುತ್ತಾನೆ. ಆವುಗಳಲ್ಲಿ ಕಾಣಬರುವ ಕುಂದು ಕೊರತೆಗಳಿಗಾಗಿ, ಬಡತನಕ್ಕಾಗಿ, ಮರುಗುತ್ತಾನೆ. ಅದ್ಬುತ, ಮಾಯೆ ಮಾಡಿದ ಪವಾಡವಿದು. ಒಂದು ದೃಷ್ಟಿಯಲ್ಲಿ ಈ ಮಾಯೆ ನಿರ್ಮಲ ಆತ್ಮ ವಸ್ತುವನ್ನೇ ಕೊಂದು ಹಾಕಿತು, ಅಂದರೆ ನಿರ್ಮಲ ಜ್ಞಾನ ಕ್ಷೇತ್ರದಿಂದ ಆಜ್ಞಾನದ ಅಂಧಕಾರದಲ್ಲಿ ನೂಕಿತು. ತನ್ನ ಅಳಿವಿನಲ್ಲಿ ಬಂದಿಸಿತು. ಹಾಗೆ ಬಂದಿಸಿ ಅಟ್ಟಹಾಸದಿಂದ ಕೂಗಿತು: ತನ್ನ ಜಯ ಸಾರಲು. ಮಾಯೆ ಹೀಗೆ ಮಾಡಿತು ಎಂಬ ತಿಳಿವು ಉಂಟಾದ ಕ್ಷಣವೇ ಅದು ಮಾಯ. ಜೀವನು ವಿಮುಕ್ತ. ಚಿಂತೆಯೂ ಇಲ್ಲ, ಸಿರಿಯೂ ಇಲ್ಲ, ಬಡತನವು ಇಲ್ಲ. ಈ ಸ್ಥಿತಿಯನ್ನು ಅನುಭವಿಸುವ ಅಲ್ಲಮರು ಮಾಯೆಯ ಈ ವಿಲಾಸವನ್ನ ವಿಡಂಬಿಸಿದ್ದಾರೆ.


ವೇದವೆಂಬುದು ಓದಿನ ಮಾತು.

ಶಾಸ್ತ್ರವೆಂಬುದು ಸಂತೆಯ ಸುದ್ದಿ.

ಪುರಾಣ ವೆಂಬುದು ಪುಂಡರ ಗೋಷ್ಠಿ.

ತರ್ಕವೆಂಬುದು ತಗರ ಹೋರಟೆ.

ಭಕ್ತಿಯೆಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬ ಮೀರಿದ ಘನವು !


ವೇದವೆನ್ನುವುದು ಕೇವಲ ವಿಶಿಷ್ಟರೀತಿಯ ಪಠಿ ಸಲಿಕ್ಕಿರುವ ಶಬ್ದ ರಾಶಿ. ಶಾಸ್ತ್ರಗಳೆಂಬವು ನಿರಾಧಾರ ಮಾತುಗಳು. ಪುರಾಣಂಗಳೆಲ್ಲ ಬಲವಂತರ ಸಂಘರ್ಷಕ ಕಥೆಗಳು. ತರ್ಕವು ಖಂಡನ-ಮಂಡನಾತ್ಮಕ ; ಭೌತಿಕ ಹೋರಾಟ. ತೋರುಭಕ್ತಿಯೆಂಬುದು ಪದಾರ್ಥಗಳ ನಿವೇದಿಸಿ ಉಪಭೊಗಿಸಬಲ್ಲ ಮಾತ್ರ. ಪರಮಾತ್ಮನು ಈ ವೇದ, ಶಾಸ್ತ್ರ, ಪುರಾಣ, ತರ್ಕ ಹಾಗೂ ತೋರು ಭಕ್ತಿ ಗಳಿಗೆ ನಿಲುಕದ ಸತ್ಯ. ಅವನು ಘನಕ್ಕೆ ಘನ, ಪರಿಪೂರ್ಣ. ಅವನನ್ನು ಅದ್ವಯಭಾವದಿಂದ ಆರಾಧಿಸುವ ಶರಣ. ಅವನಿಗೆ ವೇದಾದಿಗಳ ಆಲಂಬನವಿಲ್ಲ.


ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.

ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.

ತನ್ನ ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ

ಬಿನ್ನಾಣ ತಪ್ಪಿತ್ತು ಗುಹೇಶ್ವರಾ...

ಭೌತಿಕ ಪ್ರಪಂಚದಲ್ಲಿ ಸುಖ ದುಃಖಾಂಶಗಳು ಸಮನಲ್ಲ, ಸುಖ ಸಾಸುವೆಯಷ್ಟಾದರೆ ದುಃಖ ಸಾಗರದಷ್ಟು. ಇದು ಎಲ್ಲರಿಗು ಗೊತ್ತು. ಆದರೂ ಅಚ್ಚರಿಯ ಸಂಗತಿ ಎಂದರೆ ಬಹುತರ ಎಲ್ಲರೂ ಒಂದು ಕ್ಷಣದ ಸುಖಕ್ಕಾಗಿ ಹೆಣಗುತ್ತಾರೆ, ಹಾತೊರಯುತ್ತಾರೆ , ತಮ್ಮ ನಿಜ ಸ್ವರೂಪವನೆ ಮರೆತು ಪ್ರಾಂಪಚಿಕ ಸುಖ ಎಂಬ ನಿಧಾನವನು ಸಾಧಿಸಹೋದರೆ ಭಕ್ತಿಯ ವ್ಯೇಭವ, ಭಗವದನುಭೂತಿ ತಪ್ಪಿಹೋಗುತ್ತದೆ. ಭಕ್ತಿಪಥಿಕನು ಸಾಂಸಾರಿಕ ವಿಷಯಲಾಲಸೆಯನ್ನು ತ್ಯಜಿಸಬೇಕು. ದೇವನಲ್ಲಿಯೂ ನಿಷ್ಠೆ ಕರಿಗೊಳ್ಳಬೇಕು ಅನ್ಯನೆನಹು ನೀಗಿದ ಮನಸ್ಸು ದೇವನಲ್ಲಿ ಅನನ್ಯವಾಗಿ ನೆಲೆಸಬೇಕು. ಇದು ಭಕ್ತಿ ಪ್ರಂಪಚ. ಇಲ್ಲಿ ಸುಖ, ಸಾಗರದಷ್ಟು. ದುಃಖ, ಶೂನ್ಯ.


ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ.

ತುಟ್ಟತುದಿಯ ಮೆರುಗಿರಿಯ ಮೆಟ್ಟಿ ಕೂಗಿದಡಿಲ್ಲ.

ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.

ನಿಚ್ಚಕ್ಕೆ ನಿಚ್ಚ ನೆನೆವ ಮನವ,

ಅಂದಂದಿಗೆ ಅತ್ತ ಲಿತ್ತ ಹರಿವ ಮನವಚಿತ್ತಿನಲ್ಲಿ ನಿಲ್ಲಿಸಬಲ್ಲಡೆ,
ಬೆಚ್ಚಬರಿಯ ಬೆಳಗು ಗುಹೇಶ್ವರಲಿಂಗವು.

ದೂರದೂರದ ಪವಿತ್ರಕ್ಷೇತ್ರಗಳನ್ನು ಸುತ್ತಿ ಸುತ್ತಿ ಬಂದರೂ ಸರಿ, ಗಂಗೆಯಲ್ಲಿ ಲಕ್ಷ ಸಲ ಮಿಂದರೂ ಸರಿ, ಮೆರುಗಿಯ ತುತ್ತತುದಿಯನ್ನೇರಿ ಉಚ್ಚ ಸ್ವರ ದಿಂದ ಪ್ರಾರ್ಧಿಸಿದರೂ ಸರಿ, ಅಥವಾ ನಿತ್ಯ ನೇಮಗಳಿಂದ ತನುವನ್ನು ದಂಡಿಸಿದರೂ ಸರಿ ಆತ್ಮ ದರ್ಶನವಾಗದು ,ಶಿವಸಮರತಿ ಸಿದ್ದಿಸದು. ಕ್ಷಣ ಕ್ಷಣವೂ ವಿಷಯಗಳನ್ನು ನೆನೆವ ಹಾಗೂ ಅವುಗಳತ್ತ ಹರಿವ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಬೇಕು, ಆಗ ಮಾತ್ರ ಬರಿ ಅರಿವಿನ ಸ್ವರೂಪ ವಾದ ಪರವಸ್ತುವಿನ ಸಾಕ್ಷಾತ್ಕಾರ ! ವಾಯದ ಪಿಂಡಿಗೆ ಮಾಯದ ದೇವರಿಗೆ, ವಯಕ್ಕೆ ಕಾಯವ ಬಳಲಿಸದೆ ಪೂಜಿಸಿರೊ! ಕಟ್ಟು ಗೊಂಟಕ್ಕೆ ಬಂದ ದೇವರ ಪೂಜಿಸಲು, ಸೂಜಿಯ ಪೋಣಿಸಿ ದಾರವ ಮರೆದಡೆ ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ... ಹುಸಿಯ ಪೀಠದಲಿರಿಸಿ ಹುಸಿಯ ದೇವರಿಗೆ ಬರಿದೆ ಅರ್ಚಿಸುವ ಬಳಲಿಕೆ ಬೇಡ ; ಪೂಜಿಸಿರಿ ನಿಜದೇವರ, ನಿಜಭಾವದಿ. ಶುದ್ದ ಭಾವದಲ್ಲಿ ಭಾವಲಿಂಗ ಸ್ಥಿರಗೊಳಿಸಿ ಅದರ ಧ್ಯಾನದಲ್ಲಿ ಮನವ ನಿಯೋಗಿಸಿರಿ. ಪೂರ್ವದ ಅನ್ಯ ಭಾವಗಳನ್ನೆಲ್ಲ ಮರೆತುಬಿಡಿ. ಆಗ ಕಾಯ ಉಂಟಾಗುತ್ತದೆ. ಅಂಥ ಸಮರತಿಯ ಅನುಭವಿಯೇ ಶರಣ,


ಆಸೆಯೆಂಬ ಶೂಲದ ಮೇಲೆ ವೇಷವೆಂಬ ಹೆಣನ ಕುಳ್ಳಿರಿಸಿ

ಧರೆಯ ಮೇಲುಳ್ಳ ಹಿರಿಯರು ಹೇಂಗೆ ಸವೆದರು ನೋಡಾ !

ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು

ಹೇಸಿಕೆಯಾಯಿತ್ತು ಗುಹೇಶ್ವರಾ.
..

ಆಸೆ ಎನ್ನುವುದು ಶೋಲ. ಅದರ ಮೇಲೆ ಕೇವಲ ತೊರೆಕೆಮಾತ್ರವಾದ ಜಡಪ್ರಪಂಚ. ಲೋಕದ ಬುದ್ದಿವಂತರೆಲ್ಲ ಆ ಪ್ರಪಂಚಕ್ಕಾಗಿ ಜೀವನವಿಡಿ ಶ್ರಮಿಸಿ ತಮ್ಮ ಆಯುಷ್ಯ ವನ್ನು ಸವೆಸುತ್ತಾರೆ. ಆಸೆಗಳೇ ಪ್ರಾಧಾನ್ಯ ಕೊಟ್ಟು ಅವುಗಳನ್ನು ಪೂರ್ಣಗೊಳಿಸಲು ಸಾದಾ ಸುಳಿವ, ಹೆಣಗಾಡುವ ಹಿರಿಯ ಜನರ ನೋಡಿ ಅಲ್ಲಮರು ಜುಗುಪ್ಸೆ ಪಡುತ್ತಾರೆ. ಒಡಲಲ್ಲಿ ಹುಟ್ಟಿತ್ತು, ಭ್ರಮೆಯಿಂದ ಬೆಳೆಯಿತ್ತು. ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ. ಇದು ಒಂದು ಸೋಜಿಗವ ಕಂಡೆ. ಕೊಡೆ ಭರಿತವೆಂದರಿಯಲು ಅಂಗದಳಲವಟ್ಟಿತ್ತು ಗುಹೇಶ್ವರಾ... 'ಅಹಂ' ಅಂಬ ಭಾವಾವು ದೇಹದಲ್ಲಿ ಹುಟ್ಟು ತ್ತದೆ . ವರ್ಗ - ವರ್ಣ ಮುಂತಾದ ಭ್ರಮೆಗಳನುಂಡು ಬೆಳೆಯುತ್ತದೆ. ಈ ದೇಹದೊಂದಿಗೆ ಹುಟ್ಟಿಬಂದ ಈ ಅಹಂಭಾವಕ್ಕೆ ಮೂಲ ಕಾರಣ ತನ್ನ ನಿಜವ ತಾನರಿಯದಿರುವುದು ಅಂದು ಅಚ್ಚರಿಯ ಸಂಗತಿಯೆಂದರೆ ಎಲ್ಲಡೆ ತುಂಬಿದ ಆತ್ಮ ವಸ್ತುವನ್ನು ಅರಿತ ಒಡನೆಯೆ ಈ ಅಹಂ ಭಾವವು ಮಾಯವಾಗುವುದು. ಶರಣನಲ್ಲಿ ಈ ಅಹಂ ಇಲ್ಲ, ಏಕೆಂದರೆ ಷಡ್ ಸ್ತಲದ ಏಣಿಯನೇರಿ ತಾನು ಕೇವಲ ಚೈತನ್ಯ ಘನ ಎಂಬುದನು ಅರಿತ. ಅವನಲಿ ಈಗ ಒಡಲ ಭಾವವೂ ಇಲ್ಲ, ವಿಭಿನ್ನ ಭಾವ ಭ್ರಮೆಗಳು ಇಲ್ಲ.


ವೇದವೆಂಬುದು ಓದಿನ ಮಾತು.
ಶಾಸ್ತ್ರವೆಂಬುದು ಸಂತೆಯ ಸುದ್ದಿ.

ಪುರಾಣ ವೆಂಬುದು ಪುಂಡರ ಗೋಷ್ಠಿ.

ತರ್ಕವೆಂಬುದು ತಗರ ಹೋರಟೆ.

ಭಕ್ತಿಯೆಂಬುದು ತೋರಿ ಉಂಬ ಲಾಭ.

ಗುಹೇಶ್ವರನೆಂಬ ಮೀರಿದ ಘನವು !


ವೇದವೆನ್ನುವುದು ಕೇವಲ ವಿಶಿಷ್ಟರೀತಿಯ ಪಠಿ ಸಲಿಕ್ಕಿರುವ ಶಬ್ದ ರಾಶಿ. ಶಾಸ್ತ್ರಗಳೆಂಬವು ನಿರಾಧಾರ ಮಾತುಗಳು. ಪುರಾಣಂಗಳೆಲ್ಲ ಬಲವಂತರ ಸಂಘರ್ಷಕ ಕಥೆಗಳು. ತರ್ಕವು ಖಂಡನ-ಮಂಡನಾತ್ಮಕ ; ಭೌತಿಕ ಹೋರಾಟ. ತೋರುಭಕ್ತಿಯೆಂಬುದು ಪದಾರ್ಥಗಳ ನಿವೇದಿಸಿ ಉಪಭೊಗಿಸಬಲ್ಲ ಮಾತ್ರ. ಪರಮಾತ್ಮನು ಈ ವೇದ, ಶಾಸ್ತ್ರ, ಪುರಾಣ, ತರ್ಕ ಹಾಗೂ ತೋರು ಭಕ್ತಿ ಗಳಿಗೆ ನಿಲುಕದ ಸತ್ಯ. ಅವನು ಘನಕ್ಕೆ ಘನ, ಪರಿಪೂರ್ಣ. ಅವನನ್ನು ಅದ್ವಯಭಾವದಿಂದ ಆರಾಧಿಸುವ ಶರಣ. ಅವನಿಗೆ ವೇದಾದಿಗಳ ಆಲಂಬನವಿಲ್ಲ.


ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.
ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.
ತನ್ನ ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರಾ.


ಭೌತಿಕ ಪ್ರಪಂಚದಲ್ಲಿ ಸುಖ ದುಃಖಾಂಶಗಳು ಸಮನಲ್ಲ, ಸುಖ ಸಾಸುವೆಯಷ್ಟಾದರೆ ದುಃಖ ಸಾಗರದಷ್ಟು. ಇದು ಎಲ್ಲರಿಗು ಗೊತ್ತು. ಆದರೂ ಅಚ್ಚರಿಯ ಸಂಗತಿ ಎಂದರೆ ಬಹುತರ ಎಲ್ಲರೂ ಒಂದು ಕ್ಷಣದ ಸುಖಕ್ಕಾಗಿ ಹೆಣಗುತ್ತಾರೆ, ಹಾತೊರಯುತ್ತಾರೆ , ತಮ್ಮ ನಿಜ ಸ್ವರೂಪವನೆ ಮರೆತು ಪ್ರಾಂಪಚಿಕ ಸುಖ ಎಂಬ ನಿಧಾನವನು ಸಾಧಿಸಹೋದರೆ ಭಕ್ತಿಯ ವ್ಯೇಭವ, ಭಗವದನುಭೂತಿ ತಪ್ಪಿಹೋಗುತ್ತದೆ. ಭಕ್ತಿಪಥಿಕನು ಸಾಂಸಾರಿಕ ವಿಷಯಲಾಲಸೆಯನ್ನು ತ್ಯಜಿಸಬೇಕು. ದೇವನಲ್ಲಿಯೂ ನಿಷ್ಠೆ ಕರಿಗೊಳ್ಳಬೇಕು ಅನ್ಯನೆನಹು ನೀಗಿದ ಮನಸ್ಸು ದೇವನಲ್ಲಿ ಅನನ್ಯವಾಗಿ ನೆಲೆಸಬೇಕು. ಇದು ಭಕ್ತಿ ಪ್ರಂಪಚ. ಇಲ್ಲಿ ಸುಖ, ಸಾಗರದಷ್ಟು. ದುಃಖ, ಶೂನ್ಯ.


ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ.
ತುಟ್ಟತುದಿಯ ಮೆರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.

ನಿಚ್ಚಕ್ಕೆ ನಿಚ್ಚ ನೆನೆವ ಮನವ,

ಅಂದಂದಿಗೆ ಅತ್ತ ಲಿತ್ತ ಹರಿವ ಮನವ ಚಿತ್ತಿನಲ್ಲಿ ನಿಲ್ಲಿಸಬಲ್ಲಡೆ,

ಬಚ್ಚಬರಿಯ ಬೆಳಗು ಗುಹೇಶ್ವರಲಿಂಗವು.!


ದೂರದೂರದ ಪವಿತ್ರಕ್ಷೇತ್ರಗಳನ್ನು ಸುತ್ತಿ ಸುತ್ತಿ ಬಂದರೂ ಸರಿ, ಗಂಗೆಯಲ್ಲಿ ಲಕ್ಷ ಸಲ ಮಿಂದರೂ ಸರಿ, ಮೆರುಗಿಯ ತುತ್ತತುದಿಯನ್ನೇರಿ ಉಚ್ಚ ಸ್ವರ ದಿಂದ ಪ್ರಾರ್ಧಿಸಿದರೂ ಸರಿ, ಅಥವಾ ನಿತ್ಯ ನೇಮಗಳಿಂದ ತನುವನ್ನು ದಂಡಿಸಿದರೂ ಸರಿ ಆತ್ಮ ದರ್ಶನವಾಗದು ,ಶಿವಸಮರತಿ ಸಿದ್ದಿಸದು. ಕ್ಷಣ ಕ್ಷಣವೂ ವಿಷಯಗಳನ್ನು ನೆನೆವ ಹಾಗೂ ಅವುಗಳತ್ತ ಹರಿವ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಬೇಕು, ಆಗ ಮಾತ್ರ ಬರಿ ಅರಿವಿನ ಸ್ವರೂಪ ವಾದ ಪರವಸ್ತುವಿನ ಸಾಕ್ಷಾತ್ಕಾರ !