Friday, April 9, 2010

ಶರಣರ ಅನುಭಾವದ ನುಡಿಗಳನ್ನ ವಚನ ನಿರ್ವಚನಗಳ ಮೂಲಕ ಪ್ರಚುರಪಡಿಸುವ ಒಂದು ಸಣ್ಣ ಪ್ರಯತ್ನ ಇದಾಗಿದೆ...

ಕಾಲು ಗಳೆರಡು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ,
ಬಂಡಿಯ ಹೊಡೆವವರ್ಯೆವರು ಮಾನಿಸರು
ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ,
ಅದರಿಚ್ಚೆಯ ನರಿದು ಹೊಡೆ ಯದಿರ್ದಡೆ
ಅದರಚ್ಚು ಮುರಿದಿತ್ತು ಗುಹೇಶ್ವರಾ...

ದೇಹ ಒಂದು ಬಂಡಿ. ಕಾಲುಗಳೇ ಚಕ್ರಗಳು, ಇದನ್ನು ನಡೆಸುತ್ತಿರುವವರು ಐದು ಜನ ವಿಚಿತ್ರವಲ್ಲವೇ! ಆದರೂ ನಿಜ, ಈ ಐದು ಜನ ಮಾನಿಸರೆ ಪಂಜೆಂದ್ರಿಯಗಳು, ಆತ್ಮ ಎಂಬ ಮಾಲೀಕ ಈ ಬಂಡಿಯಲ್ಲಿ ಪ್ರಯಾಣ ಮಾಡತ್ತಾ ಇದ್ದಾನೆ, ಪಾಪ ಈ ಮಾಲೀಕ ಬಹಳ ಸಜ್ಜನ, ಹಠ ಹಿಡಿಯೋಲ್ಲ, ಗಲಾಟೆ ಮೊದಲೇ ಇಲ್ಲ, ಹೀಗಾಗಿ ಐದು ಜನ ಮಾನಿಸರಿಗೆ ಹೇಳೋರಿಲ್ಲ ಕೇಳೋರಿಲ್ಲ, ಅವರದ್ದೇ ರಾಜ್ಯ, ಅದು ಅಲ್ಲದೆ ಮನಸ್ಸೆಂಬ ಸುಳ್ಳು ಮಾಲೀಕ ನಿಜ ಮಲಿಕನಿಗಿಂತಲೂ ಹೆಚ್ಚು ಗಲಾಟೆ ಮಾಡಿ ತನ್ನ ಶಿಷ್ಯರಿಗೆ, ಅಂದ್ರೆ ಪಂಜೇಂದ್ರಿಯಗಳಿಗೆ ಹೆಚ್ಚು ಅಧಿಕಾರ ಕೊಟ್ಟಿದ್ದಾನೆ, ಇಂದ್ರಿಯಗಳು ಮನಸ್ಸೇ ನಿಜಮಾಲಿಕನೆದು ತಿಳಿದು ಖುಷಿಯಾಗಿ ಬಂಡಿಯನ್ನ ನಡೆಸುತ್ತವೆ. ಅದು ಅಲ್ಲದೆ "ಒಬ್ಬರಿಗೊಬ್ಬರು ಸಮನಿಲ್ಲಾ" ಈ ಇಂದ್ರಿಯಗಳ ಕಚ್ಚಾಟದಲ್ಲಿ ನಿಜಮಾಲಿಕನ ಇಚ್ಛೆ ಅರ್ಥವೇ ಆಗುವದಿಲ್ಲ. ಮಾಲೀಕನ ಇಚ್ಚೆ ಅರ್ಥ ಮಾಡಿಕೊಳ್ಳದಿದ್ದರೆ 'ಅದರಚ್ಚು ಮುರಿಯಿತ್ತು' ಬಂಡಿಗೆ ಅಚ್ಚೆ ಆಧಾರ ಸ್ಥಾನ ಅದೇ ಮುರಿಯಿತೆಂದರೆ, ಬಂಡಿಯ ಕಥೆಯೇ ಮುಗಿದಂತೆ. ಆತ್ಮ ಸುಖವ ಮರೆತು, ಇಂದ್ರಿಯಗಳ ಸುಖಕ್ಕೆ ಬಲಿಯಾಗಿ ಲೋಲುಪ ಜೀವನವೆಂಬ ವ್ಯಾಧಿಯಿಂದ ದೇಹವೆಂಬ ಬಂಡಿಯನ್ನ ರೋಗಗಳಿಂದ ಹಾಳು ಮಾಡುತ್ತ ಇದ್ದಾನೆ.


ಸಂಬಂಧ ಅಸಂಬಂಧವೆಂದು
ಹೆಸರಿಟ್ಟು ಕೊಂಡು ನುಡಿವಿರಿ
ಸಂಬಂಧವಾವುದು? ಅಸಂಬಂಧವಾವುದು?
ಬಲ್ಲಡೆ ನೀವು ಹೇಳಿರೆ !
ಕಾಯ ಸಂಬಂಧ , ಜೀವ ಸಂಬಂಧ, ಪ್ರಾಣಸಂಬಂಧ
ಇಂತೀ ತ್ರಿವಿಧ ಸಂಬಂಧವನರಿದಡೆ
ಆತನೆ ಸಂಬಂಧಿ ಕಾಣಾ ಗುಹೇಶ್ವರಾ...


ಲಿಂಗ-ಅಂಗಗಳ ಸಂಭಂಧ ಮತ್ತು ಅಸಂಬಂಧಗಳನ್ನೂ ಕುರಿತು ಧಾರಾಳವಾಗಿ ಮಾತಾನಾಡುತ್ತಾರೆ ಜನ. ಸಂಬಂಧ ಯಾವುದು? ಅಸಂಬಂಧ ಯಾವುದು? ಇವುಗಳನ್ನು ಪರಾಮರ್ಶಿಸಿ ಅರಿಯಬೇಕು. ನಿಜವಾಗಿಯೂ ನೋಡಿದರೆ ಅಂಗ (ಕಾಯ)ವೆ ಪೀಠ, ಆ ಅಂಗದೊಳಗಿರುವ ಜೀವವೇ ಲಿಂಗ. ಆ ಜೀವಲಿಂಗದೊಳಗೆ ಶಿವನ ಕಳೆ ಹುದುಗಿದೆ. ಅದುವೆ ಪ್ರಾಣಲಿಂಗ. ಈ ಮೂರಕ್ಕೂ ಅಗಲದ ಸಂಬಂಧ. ಆ ಸಂಭಂಧವುಳ್ಳವನೆ ಪ್ರಾಣಲಿಂಗ ಸಂಬಂಧಿ.



ಹೊನ್ನು ಮಾಯೆಯೆಂಬರು, ಹೆಣ್ಣು ಮಾಯೆಯೆಂಬರು,
ಮಣ್ಣು ಮಾಯೆಯೆಂಬರು ;
ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ.

ಮನದ ಮುಂದಣ ಆಸೆಯೇ ಮಾಯೆ ಕಣಾ ಗುಹೇಶ್ವರಾ...


ಸಾಮಾನ್ಯವಾಗಿ ಹೊನ್ನು, ಹೆಣ್ಣು ಮತ್ತು ಮಣ್ಣುಗಳು ಮಾಯೆಯೆಂದು ಜನ ತಿಳಿಯುತ್ತಾರೆ. ನಿಜವಾಗಿ ಯೋಜಿಸಿದರೆ ಜೀವನನ್ನು ಭಾವದ ಬಂಧನಕ್ಕೆ ಒಳಪಡಿಸುವುದು, ತನ್ನ ನಿಜ ಸ್ವರೂಪವನ್ನ ಮರೆಮಾಚುವುದು, ಹೊನ್ನು ಅಲ್ಲ, ಹಣ್ಣು ಅಲ್ಲ, ಮಣ್ಣು ಅಲ್ಲ, ಅದು ಮನಸ್ಸಿನೊಳಗಿರುವ ಆಯಾ ವಿಷಯಗಳ ಆಸೆ. ಆದ್ದರಿಂದ ಆ ಆಸೆಯೇ ಮಾಯೆಯೆಂದು ಅಲ್ಲಮರು ಹೇಳಿದ್ದಾರೆ.


ಅರಿವಿನಲ್ಲಿ ಉದಯಿಸಿದ ಮರುಹು
ನಷ್ಟವಾಗಿದ್ದ
ಶರಣನ ಪರಿಯನರಿಯಲು ಉಂಟೆ ?
ಗತಿಯನುರಸಲು ಉಂಟೆ ?

ಶಿಶು ಕಂಡ ಕನಸಿನಂತ್ತಿಪ್ಪರು ಗುಹೇಶ್ವರಾ,

ನಿಮ್ಮ ಶರಣರು. ಶಿವಯೋಗವು ಒಂದು ಅರಿವಿನ ಸಾಧನೆ. ಆ ಸಾಧನೆಯ ಕೊನೆಕೊನೆಯ ಹಂತದಲ್ಲಿ ಅಭೇದಜ್ಞಾನವು ಉದಿಸುತ್ತದೆ. ಅದರ ಪರಿಣಾಮವಾಗಿ ದೇಹಾತ್ಮ ಭಾವಕ್ಕೆ ಕಾರಣವಾದ ಮರುಹು ನಷ್ಟವಾಗುತ್ತದೆ. ಆ ಸ್ಥಿತಿಯಲ್ಲಿ ನೆಲೆಸಿರುವ ಶರಣನು ಲಿಂಗಭಿನ್ನವಿಟ್ಟು ಅರಿಯಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸಾಧ್ಯ-ಸಾಧಕ ಎಂಬ ಭೇಧವೆಲ್ಲ. ಶಿಶು ಕಂಡ ಕನಸಿನಂತೆ ಅವನ ನಿಲುವು ; ಶಬ್ದಕ್ಕೆ ನಿಲುಕದುದು, ಅದನ್ನು ಕರುಹಿಟ್ಟು ಹೇಳಲು ಬಾರದು. ಅದೊಂದು ಶಬ್ದ ಮುಗ್ದ ಸ್ಥಿತಿ.

ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನೆಸಿಕೊಳ್ಳಬಹುದೆ ?

ಆ ಠಾವು ಹಿಂಗಿದಡೆ ಭಂಗಿತನು ಕಂಡಾ!

ಅಂತರಂಗ ಒಡಗೂಡಿದುದನರಿಯರು

ಗುಹೇಶ್ವರನೆಂಬುದು ಮೀರಿದ ಘನವು...

ಕಣಕಾಲಿನ ಗೆಜ್ಜೆಯ ಕಟ್ಟಿಕೊಂಡು ಜಂಗಮನಗಿಹೆನೆಂದು ಹೇಳಿದರೆ ಅದನು ಒಪ್ಪಬಹುದೇ ? ಆ ಗೆಜ್ಜೆ ತಪ್ಪಿಹೋದರೆ ಆ ಜಂಗಮನು ಭಂಗಿತ. ವೇಷದಾರಿ ಜಂಗಮರು ಜಂಗಮನಾಗುವ ಅಂತರಂಗದ ಸಧನೆಯನರಿಯರು. ಇಂದ್ರಿಯಗಳ ಹರಿದಾಟ ನಿಲ್ಲಬೇಕು. ವಿಷಯವಿರಾಗ ಅಂಗವಿಸಬೇಕು. ಮನವು ಲಿಂಗದ ನೆನಹಿನಲಿ ಒಂದಾಗಬೇಕು. ಇಂಥ ಜಂಗಮಸ್ಥಿತಿಯನು ಪಡೆಯದೆ ಬರಿವೇಶದಿಂದ ಜಂಗಮರಾದೆವೆಂಬುದು ಹಾಸ್ಯಾಸ್ಪದ. ಪರಮಾತ್ಮ ವೇಷಗಳ ಆಳುವಿಗೆ ಸಿಲುಗುವನಲ್ಲ. ದೃಷ್ಟಿಗೆ ಕಾಣುವ, ಬುದ್ಧಿಗೆ ಅಳವಡುವ, ಭಾವಕ್ಕೆ ನಿಲುಕುವ ಎಲ್ಲವನು ಮೀರಿ ನೆಲೆಸಿದವ ದೇವ. ಅವನನ್ನರಿತ ಶರಣ ನಿಜ ಜಂಗಮ.

ನೀನಿಲ್ಲದ ಭೂಮಿಯ ಮೇಲೊಂದು ಗಿಡು ಹುಟ್ಟಿತ್ತು :

ಸಿಡಿಲು ಬಣ್ಣದವೆಂಟು ಹೂವಾದವು ನೋಡಾ ;
ಕೊಂಬಿನೊಳಗೆ ಫಲದೋರಿ ಬೇರಿನೊಳಗೆ ಹಣ್ಣಯಿತ್ತು.

ಆರೂ ಕಾಣದ ಠಾವಿನಲ್ಲಿ
ತೊಟ್ಟು ಬಿಟ್ಟು
ಬಿದ್ದ ಹಣ್ಣ ಮೆದ್ದುವನಲ್ಲದೆ ಶರಣನಲ್ಲ, ಗುಹೇಶ್ವರಾ...

ಜಡಭಾವವಿಲ್ಲದ ಶುದ್ದ ಹೃದಯವೇ ಭೂಮಿ. ಅಲ್ಲಿ ಹುಟ್ಟಿದುದು ಭಕ್ತಿವೃಕ್ಷ. ಅಷ್ಟ, ಸದ್ಗುಣಗಳು. ಆ ಪುಷ್ಪಗಳು. ಆ ಪುಷ್ಪ ಶಾಖೆಯಲ್ಲಿ ಕಾಣಬಂದುದು ಶಿವಜ್ಞಾನವೆಂಬ ಕಾಯಿ, ಆ ಕಾಯಿಯು ಶಿವೋಹಂ ಎಂಬ ಅನುಸಂಧಾನದಿಂದ ಮಾಗಿ ಶಿವನುಭೂತಿಯೆಂಬ ಹಣ್ಣಾಗುತ್ತದೆ, ಶರಣ ಸ್ಥಲದಲ್ಲಿ. ಆ ಸ್ಥಲವು ಸಾಧಕ ನಿಗಲ್ಲದೆ ಯಾರಿಗೂ ನಿಲುಕದ ಠಾವು. ಅಲ್ಲಿ ಶರಣ ಆ ಅನುಭೂತಿ ಫಲದಿಂದ ರಸವನ್ನು ಮನಸಾರೆ ಸವಿಯುತ್ತಾನೆ. ಆ ಸವಿಯ ಪರಮ ಸಂತೋಷದಲ್ಲಿ ಮನಮಗ್ನನಾಗುತ್ತಾನೆ. ಅವನದು ಆನಂದೋನ್ಮಾದ ಸ್ಥಿತಿ. ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ, ಮುಂದೆ ಬಂದಿಪ್ಪಳು ನೋಡಾ. ಇಂತೆ ರೆಡಿಲ್ಲದ ಕೂಸನೆತ್ತ ಬಲ್ಲಡೆ, ಆತನೇ ಲಿಂಗ್ಯೆ ಕ್ಯ ಗುಹೇಶ್ವರಾ. ಆಸೆಗೂ ರೋಶಕ್ಕು ಅನ್ಯೋನ್ಯ ಸಂಬಂಧ, ಮಗು ತಯೇಯಷ್ಟು. ಆಸೆಗೆ ಏನಾದರೂ ಭಾದೆ ಬಂದಿತೋ ರೋಷ ಅದನ್ನು ರಕ್ಷಿಸಲು ಧಾವಿಸುತ್ತದೆ. ಆಸೆಗೆ ರೋಷದ ಅಲಂಬನ, ರೋಷಕ್ಕೆ ಆಸೆಯ ಮೇಲೆ ಅಷ್ಟು ಅನುರಾಗ. ಈ ಲೌಕಿಕ ಅಸೆ-ರೋಶಗಳ ಸೊಂಗಿಲ್ಲದ ಮಧುರಭಾವವೇ ಭಕ್ತಿ. ಅದು ಸರ್ವಪ್ರಿಯ. ದೇವನಿಗೂ ಕೂಡ. ಇಂಥ ಭಕ್ತಿಯನ್ನು ಎತ್ತಿ ಹೃದಯಕಮಲದಲಿರಿಸಿ ಒಲ್ಯೆಸುವವ ಭಕ್ತ. ಅವನಿಗೆ ಲಿಂಗ ಸಮರಸತೆ ಸಹಜ ಲಭ್ಯ, ಆರು ಹೆಚ್ಚೇಗಳನಿರಿಸಿದನೋ ಲಿಂಗಸಮರಸವನನುಭಾವಿಸುವ, ಲಿಂಗ್ಯೆ ಕ್ಯ ನೆನಿಸುವ. ಭಕ್ತಿಗೂ ಮುಕ್ತಿಗೂ ಅಷ್ಟು ಸಾಮೀಪ್ಯ.


ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು;
ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು :
ಇದಾರಕ್ಕೆ ಆರಕ್ಕೆ ಇದೇನಕ್ಕೆ ಏನಕ್ಕೆ ?

ಮಾಯದ ಬೇಳುವೆ, ಹುರುಳಿಲ್ಲ.

ಕೊಂದು ಕೂಗಿತ್ತು, ನೋಡಾ ಗುಹೇಶ್ವರಾ...


ಯಾರದೋ ಸಂಪತ್ತಿಗೆ ಯಾರೋ ಚಿಂತಿಸುತ್ತಾರೆ. ಯಾರದೋ ಬಡತನಕ್ಕಾಗಿ ಮತ್ತೆ ಯಾರೋ ಮರುಗುತ್ತಾರೆ. ಆಲೋಚಿಸು, ಇದೆಲ್ಲ ಯಾರದು ಹೇಳು, ಇದೆಲ್ಲ ಏನು, ಇದರ ಸ್ವರೂಪವೇನು? ಎಲ್ಲವೂ ಮಾಯೆಯ ಭ್ರಾಂತಿ, ಹೀಗೆ ಮರುಗುವಲ್ಲಿ, ಚಿಂತಿಸುವಲ್ಲಿ ಹುರುಳಿಲ್ಲ. ಈ ಜೀವಾತ್ಮ ದೇಹಭಾವಿಯಾಗಿ ವಿಷಯಗಳ ವ್ಯಾಮೋಹದಲ್ಲಿ ಸಿಲುಕಿ ದ್ಯೆಹಿಕ ಮತ್ತು ಭೌತಿಕ ಸಿರಿಗಾಗಿ ಚಿಂತಿಸುತ್ತಾನೆ. ಆವುಗಳಲ್ಲಿ ಕಾಣಬರುವ ಕುಂದು ಕೊರತೆಗಳಿಗಾಗಿ, ಬಡತನಕ್ಕಾಗಿ, ಮರುಗುತ್ತಾನೆ. ಅದ್ಬುತ, ಮಾಯೆ ಮಾಡಿದ ಪವಾಡವಿದು. ಒಂದು ದೃಷ್ಟಿಯಲ್ಲಿ ಈ ಮಾಯೆ ನಿರ್ಮಲ ಆತ್ಮ ವಸ್ತುವನ್ನೇ ಕೊಂದು ಹಾಕಿತು, ಅಂದರೆ ನಿರ್ಮಲ ಜ್ಞಾನ ಕ್ಷೇತ್ರದಿಂದ ಆಜ್ಞಾನದ ಅಂಧಕಾರದಲ್ಲಿ ನೂಕಿತು. ತನ್ನ ಅಳಿವಿನಲ್ಲಿ ಬಂದಿಸಿತು. ಹಾಗೆ ಬಂದಿಸಿ ಅಟ್ಟಹಾಸದಿಂದ ಕೂಗಿತು: ತನ್ನ ಜಯ ಸಾರಲು. ಮಾಯೆ ಹೀಗೆ ಮಾಡಿತು ಎಂಬ ತಿಳಿವು ಉಂಟಾದ ಕ್ಷಣವೇ ಅದು ಮಾಯ. ಜೀವನು ವಿಮುಕ್ತ. ಚಿಂತೆಯೂ ಇಲ್ಲ, ಸಿರಿಯೂ ಇಲ್ಲ, ಬಡತನವು ಇಲ್ಲ. ಈ ಸ್ಥಿತಿಯನ್ನು ಅನುಭವಿಸುವ ಅಲ್ಲಮರು ಮಾಯೆಯ ಈ ವಿಲಾಸವನ್ನ ವಿಡಂಬಿಸಿದ್ದಾರೆ.


ವೇದವೆಂಬುದು ಓದಿನ ಮಾತು.

ಶಾಸ್ತ್ರವೆಂಬುದು ಸಂತೆಯ ಸುದ್ದಿ.

ಪುರಾಣ ವೆಂಬುದು ಪುಂಡರ ಗೋಷ್ಠಿ.

ತರ್ಕವೆಂಬುದು ತಗರ ಹೋರಟೆ.

ಭಕ್ತಿಯೆಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬ ಮೀರಿದ ಘನವು !


ವೇದವೆನ್ನುವುದು ಕೇವಲ ವಿಶಿಷ್ಟರೀತಿಯ ಪಠಿ ಸಲಿಕ್ಕಿರುವ ಶಬ್ದ ರಾಶಿ. ಶಾಸ್ತ್ರಗಳೆಂಬವು ನಿರಾಧಾರ ಮಾತುಗಳು. ಪುರಾಣಂಗಳೆಲ್ಲ ಬಲವಂತರ ಸಂಘರ್ಷಕ ಕಥೆಗಳು. ತರ್ಕವು ಖಂಡನ-ಮಂಡನಾತ್ಮಕ ; ಭೌತಿಕ ಹೋರಾಟ. ತೋರುಭಕ್ತಿಯೆಂಬುದು ಪದಾರ್ಥಗಳ ನಿವೇದಿಸಿ ಉಪಭೊಗಿಸಬಲ್ಲ ಮಾತ್ರ. ಪರಮಾತ್ಮನು ಈ ವೇದ, ಶಾಸ್ತ್ರ, ಪುರಾಣ, ತರ್ಕ ಹಾಗೂ ತೋರು ಭಕ್ತಿ ಗಳಿಗೆ ನಿಲುಕದ ಸತ್ಯ. ಅವನು ಘನಕ್ಕೆ ಘನ, ಪರಿಪೂರ್ಣ. ಅವನನ್ನು ಅದ್ವಯಭಾವದಿಂದ ಆರಾಧಿಸುವ ಶರಣ. ಅವನಿಗೆ ವೇದಾದಿಗಳ ಆಲಂಬನವಿಲ್ಲ.


ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.

ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.

ತನ್ನ ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ

ಬಿನ್ನಾಣ ತಪ್ಪಿತ್ತು ಗುಹೇಶ್ವರಾ...

ಭೌತಿಕ ಪ್ರಪಂಚದಲ್ಲಿ ಸುಖ ದುಃಖಾಂಶಗಳು ಸಮನಲ್ಲ, ಸುಖ ಸಾಸುವೆಯಷ್ಟಾದರೆ ದುಃಖ ಸಾಗರದಷ್ಟು. ಇದು ಎಲ್ಲರಿಗು ಗೊತ್ತು. ಆದರೂ ಅಚ್ಚರಿಯ ಸಂಗತಿ ಎಂದರೆ ಬಹುತರ ಎಲ್ಲರೂ ಒಂದು ಕ್ಷಣದ ಸುಖಕ್ಕಾಗಿ ಹೆಣಗುತ್ತಾರೆ, ಹಾತೊರಯುತ್ತಾರೆ , ತಮ್ಮ ನಿಜ ಸ್ವರೂಪವನೆ ಮರೆತು ಪ್ರಾಂಪಚಿಕ ಸುಖ ಎಂಬ ನಿಧಾನವನು ಸಾಧಿಸಹೋದರೆ ಭಕ್ತಿಯ ವ್ಯೇಭವ, ಭಗವದನುಭೂತಿ ತಪ್ಪಿಹೋಗುತ್ತದೆ. ಭಕ್ತಿಪಥಿಕನು ಸಾಂಸಾರಿಕ ವಿಷಯಲಾಲಸೆಯನ್ನು ತ್ಯಜಿಸಬೇಕು. ದೇವನಲ್ಲಿಯೂ ನಿಷ್ಠೆ ಕರಿಗೊಳ್ಳಬೇಕು ಅನ್ಯನೆನಹು ನೀಗಿದ ಮನಸ್ಸು ದೇವನಲ್ಲಿ ಅನನ್ಯವಾಗಿ ನೆಲೆಸಬೇಕು. ಇದು ಭಕ್ತಿ ಪ್ರಂಪಚ. ಇಲ್ಲಿ ಸುಖ, ಸಾಗರದಷ್ಟು. ದುಃಖ, ಶೂನ್ಯ.


ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ.

ತುಟ್ಟತುದಿಯ ಮೆರುಗಿರಿಯ ಮೆಟ್ಟಿ ಕೂಗಿದಡಿಲ್ಲ.

ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.

ನಿಚ್ಚಕ್ಕೆ ನಿಚ್ಚ ನೆನೆವ ಮನವ,

ಅಂದಂದಿಗೆ ಅತ್ತ ಲಿತ್ತ ಹರಿವ ಮನವಚಿತ್ತಿನಲ್ಲಿ ನಿಲ್ಲಿಸಬಲ್ಲಡೆ,
ಬೆಚ್ಚಬರಿಯ ಬೆಳಗು ಗುಹೇಶ್ವರಲಿಂಗವು.

ದೂರದೂರದ ಪವಿತ್ರಕ್ಷೇತ್ರಗಳನ್ನು ಸುತ್ತಿ ಸುತ್ತಿ ಬಂದರೂ ಸರಿ, ಗಂಗೆಯಲ್ಲಿ ಲಕ್ಷ ಸಲ ಮಿಂದರೂ ಸರಿ, ಮೆರುಗಿಯ ತುತ್ತತುದಿಯನ್ನೇರಿ ಉಚ್ಚ ಸ್ವರ ದಿಂದ ಪ್ರಾರ್ಧಿಸಿದರೂ ಸರಿ, ಅಥವಾ ನಿತ್ಯ ನೇಮಗಳಿಂದ ತನುವನ್ನು ದಂಡಿಸಿದರೂ ಸರಿ ಆತ್ಮ ದರ್ಶನವಾಗದು ,ಶಿವಸಮರತಿ ಸಿದ್ದಿಸದು. ಕ್ಷಣ ಕ್ಷಣವೂ ವಿಷಯಗಳನ್ನು ನೆನೆವ ಹಾಗೂ ಅವುಗಳತ್ತ ಹರಿವ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಬೇಕು, ಆಗ ಮಾತ್ರ ಬರಿ ಅರಿವಿನ ಸ್ವರೂಪ ವಾದ ಪರವಸ್ತುವಿನ ಸಾಕ್ಷಾತ್ಕಾರ ! ವಾಯದ ಪಿಂಡಿಗೆ ಮಾಯದ ದೇವರಿಗೆ, ವಯಕ್ಕೆ ಕಾಯವ ಬಳಲಿಸದೆ ಪೂಜಿಸಿರೊ! ಕಟ್ಟು ಗೊಂಟಕ್ಕೆ ಬಂದ ದೇವರ ಪೂಜಿಸಲು, ಸೂಜಿಯ ಪೋಣಿಸಿ ದಾರವ ಮರೆದಡೆ ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ... ಹುಸಿಯ ಪೀಠದಲಿರಿಸಿ ಹುಸಿಯ ದೇವರಿಗೆ ಬರಿದೆ ಅರ್ಚಿಸುವ ಬಳಲಿಕೆ ಬೇಡ ; ಪೂಜಿಸಿರಿ ನಿಜದೇವರ, ನಿಜಭಾವದಿ. ಶುದ್ದ ಭಾವದಲ್ಲಿ ಭಾವಲಿಂಗ ಸ್ಥಿರಗೊಳಿಸಿ ಅದರ ಧ್ಯಾನದಲ್ಲಿ ಮನವ ನಿಯೋಗಿಸಿರಿ. ಪೂರ್ವದ ಅನ್ಯ ಭಾವಗಳನ್ನೆಲ್ಲ ಮರೆತುಬಿಡಿ. ಆಗ ಕಾಯ ಉಂಟಾಗುತ್ತದೆ. ಅಂಥ ಸಮರತಿಯ ಅನುಭವಿಯೇ ಶರಣ,


ಆಸೆಯೆಂಬ ಶೂಲದ ಮೇಲೆ ವೇಷವೆಂಬ ಹೆಣನ ಕುಳ್ಳಿರಿಸಿ

ಧರೆಯ ಮೇಲುಳ್ಳ ಹಿರಿಯರು ಹೇಂಗೆ ಸವೆದರು ನೋಡಾ !

ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು

ಹೇಸಿಕೆಯಾಯಿತ್ತು ಗುಹೇಶ್ವರಾ.
..

ಆಸೆ ಎನ್ನುವುದು ಶೋಲ. ಅದರ ಮೇಲೆ ಕೇವಲ ತೊರೆಕೆಮಾತ್ರವಾದ ಜಡಪ್ರಪಂಚ. ಲೋಕದ ಬುದ್ದಿವಂತರೆಲ್ಲ ಆ ಪ್ರಪಂಚಕ್ಕಾಗಿ ಜೀವನವಿಡಿ ಶ್ರಮಿಸಿ ತಮ್ಮ ಆಯುಷ್ಯ ವನ್ನು ಸವೆಸುತ್ತಾರೆ. ಆಸೆಗಳೇ ಪ್ರಾಧಾನ್ಯ ಕೊಟ್ಟು ಅವುಗಳನ್ನು ಪೂರ್ಣಗೊಳಿಸಲು ಸಾದಾ ಸುಳಿವ, ಹೆಣಗಾಡುವ ಹಿರಿಯ ಜನರ ನೋಡಿ ಅಲ್ಲಮರು ಜುಗುಪ್ಸೆ ಪಡುತ್ತಾರೆ. ಒಡಲಲ್ಲಿ ಹುಟ್ಟಿತ್ತು, ಭ್ರಮೆಯಿಂದ ಬೆಳೆಯಿತ್ತು. ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ. ಇದು ಒಂದು ಸೋಜಿಗವ ಕಂಡೆ. ಕೊಡೆ ಭರಿತವೆಂದರಿಯಲು ಅಂಗದಳಲವಟ್ಟಿತ್ತು ಗುಹೇಶ್ವರಾ... 'ಅಹಂ' ಅಂಬ ಭಾವಾವು ದೇಹದಲ್ಲಿ ಹುಟ್ಟು ತ್ತದೆ . ವರ್ಗ - ವರ್ಣ ಮುಂತಾದ ಭ್ರಮೆಗಳನುಂಡು ಬೆಳೆಯುತ್ತದೆ. ಈ ದೇಹದೊಂದಿಗೆ ಹುಟ್ಟಿಬಂದ ಈ ಅಹಂಭಾವಕ್ಕೆ ಮೂಲ ಕಾರಣ ತನ್ನ ನಿಜವ ತಾನರಿಯದಿರುವುದು ಅಂದು ಅಚ್ಚರಿಯ ಸಂಗತಿಯೆಂದರೆ ಎಲ್ಲಡೆ ತುಂಬಿದ ಆತ್ಮ ವಸ್ತುವನ್ನು ಅರಿತ ಒಡನೆಯೆ ಈ ಅಹಂ ಭಾವವು ಮಾಯವಾಗುವುದು. ಶರಣನಲ್ಲಿ ಈ ಅಹಂ ಇಲ್ಲ, ಏಕೆಂದರೆ ಷಡ್ ಸ್ತಲದ ಏಣಿಯನೇರಿ ತಾನು ಕೇವಲ ಚೈತನ್ಯ ಘನ ಎಂಬುದನು ಅರಿತ. ಅವನಲಿ ಈಗ ಒಡಲ ಭಾವವೂ ಇಲ್ಲ, ವಿಭಿನ್ನ ಭಾವ ಭ್ರಮೆಗಳು ಇಲ್ಲ.


ವೇದವೆಂಬುದು ಓದಿನ ಮಾತು.
ಶಾಸ್ತ್ರವೆಂಬುದು ಸಂತೆಯ ಸುದ್ದಿ.

ಪುರಾಣ ವೆಂಬುದು ಪುಂಡರ ಗೋಷ್ಠಿ.

ತರ್ಕವೆಂಬುದು ತಗರ ಹೋರಟೆ.

ಭಕ್ತಿಯೆಂಬುದು ತೋರಿ ಉಂಬ ಲಾಭ.

ಗುಹೇಶ್ವರನೆಂಬ ಮೀರಿದ ಘನವು !


ವೇದವೆನ್ನುವುದು ಕೇವಲ ವಿಶಿಷ್ಟರೀತಿಯ ಪಠಿ ಸಲಿಕ್ಕಿರುವ ಶಬ್ದ ರಾಶಿ. ಶಾಸ್ತ್ರಗಳೆಂಬವು ನಿರಾಧಾರ ಮಾತುಗಳು. ಪುರಾಣಂಗಳೆಲ್ಲ ಬಲವಂತರ ಸಂಘರ್ಷಕ ಕಥೆಗಳು. ತರ್ಕವು ಖಂಡನ-ಮಂಡನಾತ್ಮಕ ; ಭೌತಿಕ ಹೋರಾಟ. ತೋರುಭಕ್ತಿಯೆಂಬುದು ಪದಾರ್ಥಗಳ ನಿವೇದಿಸಿ ಉಪಭೊಗಿಸಬಲ್ಲ ಮಾತ್ರ. ಪರಮಾತ್ಮನು ಈ ವೇದ, ಶಾಸ್ತ್ರ, ಪುರಾಣ, ತರ್ಕ ಹಾಗೂ ತೋರು ಭಕ್ತಿ ಗಳಿಗೆ ನಿಲುಕದ ಸತ್ಯ. ಅವನು ಘನಕ್ಕೆ ಘನ, ಪರಿಪೂರ್ಣ. ಅವನನ್ನು ಅದ್ವಯಭಾವದಿಂದ ಆರಾಧಿಸುವ ಶರಣ. ಅವನಿಗೆ ವೇದಾದಿಗಳ ಆಲಂಬನವಿಲ್ಲ.


ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.
ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ.
ತನ್ನ ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರಾ.


ಭೌತಿಕ ಪ್ರಪಂಚದಲ್ಲಿ ಸುಖ ದುಃಖಾಂಶಗಳು ಸಮನಲ್ಲ, ಸುಖ ಸಾಸುವೆಯಷ್ಟಾದರೆ ದುಃಖ ಸಾಗರದಷ್ಟು. ಇದು ಎಲ್ಲರಿಗು ಗೊತ್ತು. ಆದರೂ ಅಚ್ಚರಿಯ ಸಂಗತಿ ಎಂದರೆ ಬಹುತರ ಎಲ್ಲರೂ ಒಂದು ಕ್ಷಣದ ಸುಖಕ್ಕಾಗಿ ಹೆಣಗುತ್ತಾರೆ, ಹಾತೊರಯುತ್ತಾರೆ , ತಮ್ಮ ನಿಜ ಸ್ವರೂಪವನೆ ಮರೆತು ಪ್ರಾಂಪಚಿಕ ಸುಖ ಎಂಬ ನಿಧಾನವನು ಸಾಧಿಸಹೋದರೆ ಭಕ್ತಿಯ ವ್ಯೇಭವ, ಭಗವದನುಭೂತಿ ತಪ್ಪಿಹೋಗುತ್ತದೆ. ಭಕ್ತಿಪಥಿಕನು ಸಾಂಸಾರಿಕ ವಿಷಯಲಾಲಸೆಯನ್ನು ತ್ಯಜಿಸಬೇಕು. ದೇವನಲ್ಲಿಯೂ ನಿಷ್ಠೆ ಕರಿಗೊಳ್ಳಬೇಕು ಅನ್ಯನೆನಹು ನೀಗಿದ ಮನಸ್ಸು ದೇವನಲ್ಲಿ ಅನನ್ಯವಾಗಿ ನೆಲೆಸಬೇಕು. ಇದು ಭಕ್ತಿ ಪ್ರಂಪಚ. ಇಲ್ಲಿ ಸುಖ, ಸಾಗರದಷ್ಟು. ದುಃಖ, ಶೂನ್ಯ.


ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ.
ತುಟ್ಟತುದಿಯ ಮೆರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.

ನಿಚ್ಚಕ್ಕೆ ನಿಚ್ಚ ನೆನೆವ ಮನವ,

ಅಂದಂದಿಗೆ ಅತ್ತ ಲಿತ್ತ ಹರಿವ ಮನವ ಚಿತ್ತಿನಲ್ಲಿ ನಿಲ್ಲಿಸಬಲ್ಲಡೆ,

ಬಚ್ಚಬರಿಯ ಬೆಳಗು ಗುಹೇಶ್ವರಲಿಂಗವು.!


ದೂರದೂರದ ಪವಿತ್ರಕ್ಷೇತ್ರಗಳನ್ನು ಸುತ್ತಿ ಸುತ್ತಿ ಬಂದರೂ ಸರಿ, ಗಂಗೆಯಲ್ಲಿ ಲಕ್ಷ ಸಲ ಮಿಂದರೂ ಸರಿ, ಮೆರುಗಿಯ ತುತ್ತತುದಿಯನ್ನೇರಿ ಉಚ್ಚ ಸ್ವರ ದಿಂದ ಪ್ರಾರ್ಧಿಸಿದರೂ ಸರಿ, ಅಥವಾ ನಿತ್ಯ ನೇಮಗಳಿಂದ ತನುವನ್ನು ದಂಡಿಸಿದರೂ ಸರಿ ಆತ್ಮ ದರ್ಶನವಾಗದು ,ಶಿವಸಮರತಿ ಸಿದ್ದಿಸದು. ಕ್ಷಣ ಕ್ಷಣವೂ ವಿಷಯಗಳನ್ನು ನೆನೆವ ಹಾಗೂ ಅವುಗಳತ್ತ ಹರಿವ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಬೇಕು, ಆಗ ಮಾತ್ರ ಬರಿ ಅರಿವಿನ ಸ್ವರೂಪ ವಾದ ಪರವಸ್ತುವಿನ ಸಾಕ್ಷಾತ್ಕಾರ !